ಗಂಗೆ ಬಾರೇ ತುಂಗೇ ಬಾರೇ 
ಬಾರೇ ನೀರೇ ದಾಹ ತೀರೇ 
ಗಂಗೆ ಬಾರೇ ತುಂಗೇ ಬಾರೇ 
ಬಾರೇ ನೀರೇ ದಾಹ ತೀರೇ 
ಮಾರುತಪ್ಪ ಯಾವನಪ್ಪ ನೀರು ಕೇಳೋನು 
ಒಂಟಿ ಬಾವಿನೂರಿನಲ್ಲಿ ದಾಹ ಅನ್ನೋನು 
ಮಾರುತಪ್ಪ ಯಾವನಪ್ಪ ನೀರು ಕೇಳೋನು 
ಒಂಟಿ ಬಾವಿನೂರಿನಲ್ಲಿ ದಾಹ ಅನ್ನೋನು 
ಗಂಗೆ ಬಾರೇ ತುಂಗೇ ಬಾರೇ 
ಬಾರೇ ನೀರೇ ದಾಹ ತೀರೇ 
ಲಲಾ.. ಲಾ..ಲಾ... 
ಲಲಾ.. ಲಾ..ಲಾ... 
ಲಲಾ.. ಲಾ..ಲಾ... 
ಲಲಾ.. ಲಾ..ಲಾ... 
ರಾಮನೂರಿನಲ್ಲಿ ಇಂದು ರಾಮನೋಮಿಯೋ 
ಪಾನಕ ಮಜ್ಜಿಗೆ ಬಿಟ್ಟು ಯಾಕೆ ಕುಂತೇಯೋ 
ನೀರು ಮಜ್ಜಿಗೆಗೆ ಇಲ್ಲಿ ನೂರು ಗೌಡರು 
ನಾನು ನೀನು ಎಂದುಕೊಂಡು ಮಣ್ಣಿಗೋಯ್ದರು 
ಗಂಗೆ ಬಾರೇ ತುಂಗೇ ಬಾರೇ 
ಬಾರೇ ನೀರೇ ದಾಹ ತೀರೇ 
ಮಾರುತಪ್ಪ ಯಾವನಪ್ಪ ಹೆಣ್ಣು ನೋಡೋನು 
ಹಳದಿ ಕಣ್ಣಿನೂರಿನಲ್ಲಿ ಕಣ್ಣು ಹಾಕೋನು 
ಯಾವ ಊರೆ ನಿಂದು 
ನಾನಿದ್ದ ಊರೆ ನಂದು 
ಏನೇ ಹೆಸರು ನಿಂದು 
ನಾ ಹೇಳಬಾರದಿಂದು 
ಹೇಳಿದರೆ ಗಂಟು ಹೋಗದೂ 
ನಾಚಿದರೆ ನಂಟು ಸೇರದೂ 
ಕೈಯ್ಯ ಬಿಡೊ ಕಿಂದರಿ ಜೋಗಿ 
ಕಂಡು ಹಿಡಿಯೊ ಹೆಸರ ಕೂಗಿ 
ಹೇಳು ಬಾ ಗಿಳಿ ಬಾ ಬಳಿ ಬಾ 
ಲಾಲಲಾ ಲಲಲಾ ಲಲಲಾ 
ಮಾರುತಪ್ಪಾ ಯಾವಳಪ್ಪಾ ಹೀಗೇ ಬಂದೋಳು 
ನೀರು ಕೊಟ್ಟು ಜೀವ ಹೊತ್ತು ಕೊಂಡು ಹೋದಳು 
ಗಂಗೆ ಬಾರೇ... ತುಂಗೇ ಬಾರೇ.. 
ಬಾರೇ ನೀರೇ... ದಾಹ ತೀರೇ 
ನೀರು ಕೊಟ್ಟೆ ನೀನು 
ನೀರಾಗಿ ಹೋದೆ ನಾನು 
ಕಣ್ಣು ಬಿಟ್ಟೆ ನೀನು 
ಕಲ್ಲಾಗಿ ಹೋದೆ ನಾನು 
ನೋಡಿದರೆ ಆಸೆ ತೀರದೂ 
ಹೇಳಿದರೆ ಮಾತು ಬಾರದೂ 
ಹಾಡಿದರೆ ರಾಗ ಸಾಲದು 
ಸೇರಿದರೆ ಜೀವ ನಿಲ್ಲದು 
ಪ್ರಿತಿಸೂ ಗಿಳಿ ಬಾ ಬಳಿ ಬಾ 
ಪ್ರಿತಿಸೂ ಗಿಳಿ ಬಾ ಬಳಿ ಬಾ 
ಗಂಗೆ ಬಾರೇ... ತುಂಗೇ ಬಾರೇ.. 
ಬಾರೇ ನೀರೇ... ದಾಹ ತೀರೇ... 
ಬಾರೇ ನೀರೇ... ದಾಹ ತೀರೇ...