ಇವ ಯಾವ ಸೀಮೆ
ಗಂಡು ಕಾಣಮ್ಮೋ
ಇವನಿಗೆ ನನ್ನ ಸೀರೆ ಮ್ಯಾಲ
ಯಾಕ ಕಣ್ಣಮ್ಮೋ
ಆ ನೋಟವೊಂದು
ಬಾಣದಂಗಮ್ಮೋ
ಶಿವ ಶಿವ ಅದು ಹ್ಯಾಂಗೊ ಬಂದು
ನಾಟಿಕೊಂತಮ್ಮೋ
ಗುರುವಾರ ಬಂದ
ಗುರುತಾಯ್ತ ಎಂದ
ಆ ಏಳು ಜನುಮ
ನೆನಪಾಯ್ತ ಎಂದ
ಇವ ಗಾಜನೂರಿನ
ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ
ಜಾತಿ ಅಲ್ಲಮ್ಮೋ
ನನ್ನ ಮ್ಯಾಲ ಊರಿನ
ಕೋಟಿ ಕಣ್ಣಮ್ಮೋ
ಶಿವ ಶಿವ ನನ್ನ ಕಣ್ಣು ಯಾಕೋ
ನಿನ್ನ ಮ್ಯಾಲಮ್ಮೋ
ರತಿ ರಾಜ ಬಂದ
ಕನಸಾಗ ನಿಂದ
ಮಗು ಏಳು ಎಂದ
ನಿನ ಸೇರು ಎಂದ
ಇವ ಯಾವ ಸೀಮೆ
ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ
ಜಾತಿ ಅಲ್ಲಮ್ಮೋ
ಕಾಲಗೆಜ್ಜೆ ಕೂಡ
ಇವ ಹಾಡತಾನೆ ಹಾಡ
ಹಾಡಲೇ
ಪೂರ್ವದ
ನೆನಪ ಮಾಡಲೇ
ಕೋಳಿಗುಡ್ಡದ ಮ್ಯಾಗ
ನೀ ಹಾಡಿದಂತ ರಾಗ
ನೆನಪಿದೆ
ಹೇಳಲೇ
ನಾನು ಈಗಲೇ
ತಂಗಾಳಿ ಬೀಸುತ್ತಿದ್ದ ಹೊಂಗೆ ನೆರಳಲಿ
ಸೂಜಿಯ ಮಲ್ಲಿಗೆಯಿಟ್ಟೆ ನನ್ನ ಮುಡಿಯಲಿ
ಇವ ಗಾಜನೂರಿನ
ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ
ಜಾತಿ ಅಲ್ಲಮ್ಮೋ
ಓ ಓ ಓ..ಮೂಗು ನತ್ತಿನ ತಿರುಪ
ಬಿಗಿ ಮಾಡಲೇನೆ ಸ್ವಲ್ಪ
ಸರಿ ಸರಿ
ಅದು ಸರಿ
ವೀರಕೇಸರಿ
ಮಾತಿನಲ್ಲೂ ಸರಸ
ನಿನಗ್ಯಂಗೊ ಬಂತು ಅರಸ
ತಡಿ ತಡಿ
ತಿಳಿಸುವೆ
ಆಶಾಸುಂದರಿ
ಕುಣಿಯೋದು ನನಗ ತಾತನು
ಬಿಟ್ಟ ಉಂಬಳಿ
ಕುಣಿಸೋದು ನನಗ ಅಪ್ಪನು
ಕೊಟ್ಟ ಬಳುವಳಿ
ಇವ ಗಾಜನೂರಿನ
ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ
ಜಾತಿ ಅಲ್ಲಮ್ಮೋ
ಆ ನೋಟವೊಂದು
ಬಾಣದಂಗಮ್ಮೋ
ಶಿವ ಶಿವ ಅದು ಹ್ಯಾಂಗೊ ಬಂದು
ನಾಟಿಕೊಂತಮ್ಮೋ
ರತಿ ರಾಜ ಬಂದ
ಕನಸಾಗ ನಿಂದ
ಮಗು ಏಳು ಎಂದ
ನಿನ ಸೇರು ಎಂದ
ಅಮ್ಮೋ ಇವ ಯಾವ ಸೀಮೆ
ಗಂಡು ಕಾಣಮ್ಮೋ
ತಡಿ ತಡಿ ಇವ ಗಾಜನೂರಿನ
ಗಂಡು ಕಾಣಮ್ಮೋ