menu-iconlogo
huatong
huatong
avatar

Kambada Myalina

Sangeetha Kattihuatong
phoonck77huatong
歌詞
収録
ಕಂಬದಾ ಮ್ಯಾಲಿನ ಗೊಂಬಿಯೇ

ನಂಬಲೇನ ನಿನ್ನ ನಗಿಯನ್ನಾ

ಭಿತ್ತಿಯಾ ಮ್ಯಾಲಿನ ಚಿತ್ತಾರವೇ

ಚಿತ್ತ ಗೊತ್ತ ಹೇಳ ಉತ್ತಾರವಾ

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ

ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ

ಕಂಬದಾ ಮ್ಯಾಲಿನ ಗೊಂಬಿಯೇ

ನಂಬಲೇನ ನಿನ್ನ ನಗಿಯನ್ನಾ

ಭಿತ್ತಿಯಾ ಮ್ಯಾಲಿನ ಚಿತ್ತಾರವೇ

ಚಿತ್ತ ಗೊತ್ತ ಹೇಳ ಉತ್ತಾರವಾ

ನೀರೊಲೆಯ ನಿಗಿ ಕೆಂಡ ಸತ್ಯವೇ

ಈ ಅಭ್ಯಂಜನವಿನ್ನೂ ನಿತ್ಯವೇ

ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ

ನಿನ್ನ ವಾಸನೀ ಹರಡಿರಲಿ ಹೀಗೆಯೇ ೨

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ

ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ

ಒಪ್ಪಿಸುವೆ ಹೂ ಹಣ್ಣು ಭಗವಂತ

ನೆಪ್ಪಿಲೆ ಹರಸುನಗಿ ಇರಲೆಂತ

ಕಪ್ಪುರವ ಬೆಳಗುವೆ ದೇವನೇ

ತಪ್ಪದೆ ಬರಲೆನ್ನ ಗುಣವಂತ ೨

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ

ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ

ಕಂಬದಾ ಮ್ಯಾಲಿನ ಗೊಂಬಿಯೇ

ನಂಬಲೇನ ನಿನ್ನ ನಗಿಯನ್ನಾ

ಭಿತ್ತಿಯಾ ಮ್ಯಾಲಿನ ಚಿತ್ತಾರವೇ

ಚಿತ್ತ ಗೊತ್ತ ಹೇಳ ಉತ್ತಾರವಾ

Sangeetha Kattiの他の作品

総て見るlogo