menu-iconlogo
logo

BOMBE HELUTAITHE

logo
歌詞
ಬೊಂಬೆ ಹೇಳುತೈತೆ

ಮತ್ತೆ ಹೇಳುತೈತೆ ನೀನೇ ರಾಜಕುಮಾರ…

ಬೊಂಬೆ ಹೇಳುತೈತೆ

ಮತ್ತೆ ಹೇಳುತೈತೆ ನೀನೇ ರಾಜಕುಮಾರ…

ಹೊಸ ಬೆಳಕೊಂದು ಹೊಸಿಲಿಗೆ ಬಂದು

ಬೆಳಗಿದೆ ಮನೆಯ ಮನಗಳ ಇಂದು

ಆರಾಧಿಸೋ ರಾರಾಧಿಸೋ ರಾಜರತ್ನನು

ಆಡಿಸಿಯೇ ನೋಡು ಬೀಳಿಸಿಯೇ ನೋಡು

ಎಂದು ಸೋಲದು ಸೋತು ತಲೆಯ ಬಾಗದು…

ಬೊಂಬೆ ಹೇಳುತೈತೆ,

ಮತ್ತೆ ಹೇಳುತೈತೆ ನೀನೇ ರಾಜಕುಮಾರ

ಗುಡಿಸಲೇ ಆಗಲಿ ಅರಮನೆ ಆಗಲಿ ಆಟವೇ ನಿಲ್ಲದು ,

ಎಂದು ಆಟ ನಿಲ್ಲದು

ಹಿರಿಯರೇ ಇರಲಿ ಕಿರಿಯರೇ ಬರಲಿ ಬೇಧವೆ ತೋರದು ,

ಎಂದು ಬೇಧ ತೋರದು …

ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ

ಆಕಾಶ ನೋಡದ ಕೈಯ್ಯಿ ನಿನದು ಪ್ರೀತಿ ಹಂಚಿರುವ

ಜೊತೆಗಿರು ನೀನು ಅಪ್ಪನ ಹಾಗೆ

ಹಣ್ಣೆಲೆ ಕಾಯೋ ವಿನಯದಿ ಹೀಗೆ

ನಿನ್ನನು ಪಡೆದ ನಾವು ಪುನೀತ ಬಾಳು ನಗು ನಗುತ…

ಬೊಂಬೆ ಹೇಳುತೈತೆ

ಮತ್ತೆ ಹೇಳುತೈತೆ ನೀನೇ ರಾಜಕುಮಾರ…

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು ,

ನಂದಾ ದೀಪವೇ ಇದು…

ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು,

ಸಮಯದ ಸೂತ್ರ ಅವನದು…

ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ

ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ

ಯೋಗವು ಒಮ್ಮೆ ಬರುವುದು ನಮಗೆ

ಯೋಗ್ಯತೆ ಒಂದೇ ಉಳಿವುದು ಕೊನೆಗೆ…

ಸೂರ್ಯನೊಬ್ಬ , ಚಂದ್ರನೊಬ್ಬ ರಾಜನು ಒಬ್ಬ,

ಈ ರಾಜನು ಒಬ್ಬ

ಆಡಿಸಿಯೇ ನೋಡು ಬೀಳಿಸಿಯೇ ನೋಡು

ಎಂದು ಸೋಲದು ಸೋತು ತಲೆಯ ಬಾಗದು…

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ

ನೀನೇ ರಾಜಕುಮಾರ…

BOMBE HELUTAITHE by Vijay Prakash - 歌詞&カバー