menu-iconlogo
huatong
huatong
avatar

Ellelli Nodali

Dr. Rajkumarhuatong
rudemontreuilhuatong
가사
기록
ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ಕಣ್ಣಲ್ಲಿ ತುಂಬಿರುವೆ

ಮನದಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ಕಣ್ಣಲ್ಲಿ ತುಂಬಿರುವೆ

ಮನದಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ಆ ಕೆಂಪು ತಾವರೆ

ಆ ನೀರಿಗಾದರೆ

ಈ ಹೊನ್ನ ತಾವರೆ

ನನ್ನಾಸೆಯಾಸರೆ

ಆ ಆ

ಆ ಆ ಆ

ಆ. ಆ

ಆ ಆ ಆ

ಮಿಂಚೆಂಬ ಬಳ್ಳಿಗೆ

ಮೇಘದ ಆಸರೆ

ಈ ಹೆಣ್ಣ ಬಾಳಿಗೆ

ನಿನ್ನ ತೋಳಿನಾಸರೆ

ಓ...ಯುಗಗಳು ಜಾರಿ ಉರುಳಿದರೇನು

ನಾನೇ ನೀನು ನೀನೆ ನಾನು

ಆದ ಮೇಲೆ ಬೇರೆ ಏನಿದೆ...

ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ಕಣ್ಣಲ್ಲಿ ತುಂಬಿರುವೆ

ಮನದಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ರವಿಯನ್ನು ಕಾಣದೆ

ಹಗಲೆಂದು ಆಗದು

ನಿನ್ನನ್ನು ನೋಡದೆ

ಈ ಪ್ರಾಣ ನಿಲ್ಲದು

ಕಡಲನ್ನು ಸೇರದ

ನದಿಯಲ್ಲೆ ಕಾಣುವೆ

ನಿನ್ನನ್ನು ಸೇರದೆ

ನಾ ಹೇಗೆ ಬಾಳುವೆ

ಆ.....ವಿರಹದ ನೋವ

ಮರೆಯಲಿ ಜೀವ

ಹೂವು ಗಂಧ ಸೇರಿದಂತೆ

ಪ್ರೇಮದಿಂದ ನಿನ್ನ ಸೇರುವೆ

ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ಕಣ್ಣಲ್ಲಿ ತುಂಬಿರುವೆ

ಮನದಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ಎಲ್ಲೆಲ್ಲಿ ನೋಡಲಿ(F)ಆಆಆ... ಆ.. ಆ...ಆಹ

ನಿನ್ನನ್ನೇ ಕಾಣುವೆ(F)ಆಆಆ... ಆ.. ಆ...ಆಹ

ಎಲ್ಲೆಲ್ಲಿ ನೋಡಲಿ(F)ಆಆಆ... ಆ.. ಆ...ಆಹ

ನಿನ್ನನ್ನೇ ಕಾಣುವೆ(F)ಆಆಆ... ಆ.. ಆ...ಆಹ

Dr. Rajkumar의 다른 작품

모두 보기logo