menu-iconlogo
logo

Rangena Halliyaage Bili hendti

logo
가사
ರಂಗೇನ ಹಳ್ಳಿಯಾಗೆ

ರಂಗೇನ ಹಲ್ಲಿಯಾಗೇ

ಹಲ್ಲಿ ಅಲ್ಲಮ್ಮ ಹಳ್ಳಿ ಹಳ್ಳಿ

ರಂಗೇನ ಹಳ್ಳಿಯಾಗೆ

ರಂಗೇನ ಹಳ್ಳಿಯಾಗೆ

ಹಾ.... ರಂಗೇನ ಹಳ್ಳಿಯಾಗೆ

ಬಂಗಾರ ಕಪ್ಪತೊಟ್ಟ

ರಂಗಾದ ರಂಗೇಗೌಡ ಮೆರೆದಿದ್ದ

ರಂಗೇನ ಹಳ್ಳಿಯಾಗೆ ಬಂಗಾರ ಕಪ್ಪತೊಟ್ಟ

ರಂಗಾದ ರಂಗೇಗೌಡ ಮೆರೆದಿದ್ದ

ರಂಗೇನ ಹಳ್ಳಿಯಾಗೆ ಸಿಂಗಾರಿ ಸೀತೆಹಂಗೆ

ಬಂಗಾರಿ ರಂಗಿ ಮೈ ಅರಳಿತ್ತು

ರಂಗೇನ ಹಳ್ಳಿಯಾಗೆ ಸಿಂಗಾರಿ ಸೀತೆಹಂಗೆ

ಬಂಗಾರಿ ರಂಗಿ ಮೈ ಅರಳಿತ್ತು

ರಂಗೇನ ಹಳ್ಳಿಯಾಗೆ ಬಂಗಾರ ಕಪ್ಪತೊಟ್ಟ

ರಂಗಾದ ರಂಗೇಗೌಡ ಮೆರೆದಿದ್ದ

ನಕ್ಕ ನಕ್ಷತ್ರದಂತ ......

ನಕ್ಕ ನಕ್ಷತ್ರದಂತ ......

ಚೊಕ್ಕಾದ ರಂಗೀನ್ ಕಂಡ

ಚೊಕ್ಕಾದ ರಂಗೀನ್ ಕಂಡ

ತಕ್ಕಾದ ಹೆಂಡ್ತಿ ಅಂದ ರಂಗೇಗೌಡ

ತನಗೆ ತಕ್ಕಾದ ಹೆಂಡ್ತಿ ಅಂದ ರಂಗೇಗೌಡ

ರಂಗಿಯ ಕೈಯ ಮ್ಯಾಗೆ

ರಂಗ ಭಾಷೆಯ ಕೊಟ್ಟ

ರಂಗಿಯ ಕೈಯ ಮ್ಯಾಗೆ

ರಂಗ ಭಾಷೆಯ ಕೊಟ್ಟ

ಸಂಗಾತಿ ನೀನೆ ಅಂತ ಆಣೆ ಇಟ್ಟ

ಬಾಳ ಸಂಗಾತಿ ನೀನೆ ಅಂತ ಆಣೆ ಇಟ್ಟ

ರಂಗೇನ ಹಳ್ಳಿಯಾಗೆ ಬಂಗಾರ ಕಪ್ಪತೊಟ್ಟ

ರಂಗಾದ ರಂಗೇಗೌಡ ಮೆರೆದಿದ್ದ

ಬಂದ ರಂಗಾ ಬಂದ....

ಬಂದ ರಂಗಾ ಬಂದ....

ತಂದ ಬೇರೊಂದು ಹೆಣ್ಣಾ

ತಂದ ಬೇರೊಂದು ಹೆಣ್ಣಾ

ಮೋಜಾಗಿ ಮದುವೆ ನಡೆದೋಯ್ತು

ಬಲ್ ಸೋಕಾಗಿ ಸೋಬ್ನ ಆಗೋಯ್ತು

ಬಲ್ ಸೋಕಾಗಿ ಸೋಬ್ನ ಆಗೋಯ್ತು

ಮದುವೆನಾ ನೋಡಿ ರಂಗಿ

ಮನದಾಗೆ ದುಃಖ ನುಂಗಿ

ಮದುವೆನಾ ನೋಡಿರಂಗಿ ಮನದಾಗೆ ದುಃಖನುಂಗಿ

ಮನಸಾರೆ ಜೋಡಿನ ಹರಸಿದ್ಳು

ಮನೆದ್ಯಾವ್ರೆ ಕಾಪಾಡು ಅಂದಿದ್ಳು

ಮಂದ್ಯಾವ್ರೆ ಕಾಪಾಡು ಅಂದಿದ್ಲು

ರಂಗೇನ ಹಳ್ಳಿಯಾಗೆ ಬಂಗಾರ ಕಪ್ಪತೊಟ್ಟ

ರಂಗಾದ ರಂಗೇಗೌಡ ಮೆರೆದಿದ್ದ

ತಂದ ಬೇರೋದು ಹೆಣ್ಣಾ ಮೋಜಾಗಿ ಮದುವೆ

ಸೋಕಾಗಿ ಸೋಬ್ನ ಆಗೋಯ್ತು

ಆಗೋಯ್ತು

ಆ ಆಗೋಯ್ತು

ಆಗೋಯ್ತು

ಆಗೋಯ್ತು