menu-iconlogo
huatong
huatong
avatar

Hrudayake hedarike

krDarlingsaddahuatong
ROHAN😉_4huatong
가사
기록
***

Part 1 Female

Part 2 Male

ಹೃದಯಕೆ ಹೆದರಿಕೆ

ಹೀಗೆ ನೋಡಿದರೆ

ಹುಡುಕುತ ಬರುವೆಯಾ

ಹೇಳದೆ ಹೋದರೆ

ಎದೆಯಲ್ಲಿ ಬಿರುಗಾಳಿ

ಮೊದಲೇನೆ ಇತ್ತು

ನೀ ನನಗೆ ಏನೆಂದು

ನನಗಷ್ಟೇ ಗೊತ್ತು

ಹೃದಯಕೆ ಹೆದರಿಕೆ

ಹೀಗೆ ನೋಡಿದರೆ

ಹುಡುಕುತ ಬರುವೆಯಾ

ಹೇಳದೆ ಹೋದರೆ

*****

ಓ..ಮರವೇ ನಿನ್ನ ತಬ್ಬಿ

ಹಬ್ಬುತಿರೋ ಬಳ್ಳಿ ನಾನು

ಮೆಲ್ಲಗೆ ವಿಚಾರಿಸು ನನ್ನಾ..

ಮೈ ಮರೆತು ನಿನ್ನ ಮುಂದೆ

ವರ್ತಿಸುವ ಮಳ್ಳಿ ನಾನು

ಕೋಪವಾ ನಿವಾಳಿಸು ಚಿನ್ನಾ..

ನೀ ನನಗೆ ದೊರೆತಂತ

ಸಿಹಿಯಾದ ಮತ್ತು..

ನಿನಗಾಗೋ ಕನಸೆಲ್ಲ

ನನಗಷ್ಟೇ ಗೊತ್ತು

*****

ಹುಂ...ಹುಂ..ಹೂ ಹುಂ..ಹುಂ..ಹುಂ..

ಮುಚ್ಚಿಡುವ ಕಣ್ಣಿನಲ್ಲಿ

ಮೂಡಿರುವ ಬಣ್ಣ ನೀನು

ಮುತ್ತಿಡು ಮಾತಾಡುವಾ ಮುನ್ನ

ನೆನೆನೆನೆದು ತುಂಬಾ ಸೊರಗಿ

ಆಗಿರುವೆ ಸಣ್ಣ ನಾನು

ಹಿಡಿಸುವೆನು ಹೃದಯದಲ್ಲಿ ನಿನ್ನಾ..

ನಾ ನಿನ್ನ ಬಿಗಿದಪ್ಪಿ

ಇರುವಂತಾ ಹೊತ್ತು

ಜಗವೆಲ್ಲ ಮರೆತಾಯ್ತು

ನನಗಷ್ಟೇ ಗೊತ್ತು

ಹೃದಯಕೆ ಹೆದರಿಕೆ

ಹೀಗೆ ನೋಡಿದರೆ

ಹುಡುಕುತ ಬರುವೆಯಾ

ಹೇಳದೆ ಹೋದರೆ

*****

krDarlingsadda의 다른 작품

모두 보기logo
Hrudayake hedarike - krDarlingsadda - 가사 & 커버