ಬಾಳಿನ ಬೀದಿ ಏರುಪೇರು..
ಇಲ್ಲಿ ಸಾಗಲೇಬೇಕು ನಮ್ಮ ತೇ...ರು..
ಬಾಳಿನ ಬೀದಿ ಏರುಪೇರು..
ಇಲ್ಲಿ ಸಾಗಲೇಬೇಕು ನಮ್ಮ ತೇ...ರು..
ಬಯಸಿದ್ದೆಲ್ಲ ಎಂದೂ ನಮ್ಮ ಕೈಗೆ ಸಿಕ್ಕದು
ನಾವು ತಂದ ಪುಣ್ಯ ಎಷ್ಟೊ ಅಷ್ಟೇ ನಮ್ಮದು
ಚಿಂತಿಸಬೇಡ ಮನವೇ ದಾರಿ ಸಾಗಿಸು
ಬಾಳಿನ ಬೀದಿ ಏರುಪೇರು..
ಇಲ್ಲಿ ಸಾಗಲೇಬೇಕು ನಮ್ಮ ತೇ...ರು..
ಬಾಳಿನ ಬೀದಿ ಏರುಪೇರು..
Don't forgot to like after singing
ಸಿರಿತನ ಸುರಿದಾಗ ದೇವರು ದೊಡ್ಡೋನೆನ್ನೋದೇ
ಬಡತನ ಬಡಿದಾಗ ತುಂಬ ಕ್ರೂರಿ ಎನ್ನೋದೇ
ಅಮೃತ ದೊರೆತಾಗ ಆಹಾ ಪುಣ್ಯ ಎನ್ನೋದೇ
ಅಂಬಲಿ ಉಣುವಾಗ ಅಯ್ಯೋ ಕರ್ಮ ಎನ್ನೋದೆ
ನಮಗೆ ಕಷ್ಟ ಬಂದಾಗ
ಪರರ ಕಷ್ಟ ತಿಳಿಯೋಣ
ಅವರ ಕಣ್ಣ ಒರೆಸುತ್ತ
ನಮ್ಮ ಕಷ್ಟ ಮರೆಯೋಣ
ನೆನೆಸಿದ್ದೆಲ್ಲ ನಡೆದರೆ ನಮ್ಮ ಮಿತಿಯೇ ತಿಳಿಯದು
ಬಿದ್ದು ಎದ್ದು ಗೆದ್ದರೆ ತಾನೇ ಬಾಳು ಎನುವುದು
ಸೋಲಲೆಬೇಡ ಮನವೇ
ಆಟ ಸಾಗಿಸು
ಬಾಳಿನ ಬೀದಿ ಏರುಪೇರು..
ಇಲ್ಲಿ ಸಾಗಲೇಬೇಕು ನಮ್ಮ ತೇ...ರು..
ಬಾಳಿನ ಬೀದಿ ಏರುಪೇರು..
ಬಾಳಿನ ತೇರಲ್ಲಿ ದುಡಿಮೆ ಒಂದೇ ದೇವರು
ದೇವರ ಬೆಳಗೋದೆ ಬೆವರಿನ ಎಣ್ಣೆ ದೀಪಗಳು
ಸಹನೆ ಸಂಮಯವೇ ತೇರಿನ ಎರಡು ಗಾಲಿಗಳು
ಕರುಣೆ ಮಮತೇನೆ ಗಾಲಿಯ ಹಿಡಿದ ಕೀಲಿಗಳು
ದಿಬ್ಬ ಎದುರು ಬಂದಾಗ
ಎಳೆಯಲಂಜಬಾರದು
ಇಳಿಯುವಾಗ ಜೋಪಾನ
ಕಾಲು ಜಾರಬಾರದು
ಸವೆಸಿದ್ದೆಲ್ಲ ಬೇಕು ಎಂದರೆ ಎಂದೂ ದೊರಕದು
ಆಡಿಸುವಾತ ಕೇಳುವುದೇನೋ ನಮಗೆ ತಿಳಿಯದು
ಮರುಗಲೆಬೇಡ ಮನವೇ
ಬಾಳ ಪ್ರೀತಿಸು
ಭೂಮಿಯ ಬಾಳು ಬರಿ ಮೂರೇ ದಿವಸ ಅಂತಾರೆ
ಮೂರೇ ದಿನದಲ್ಲಿ ಎಷ್ಟು ಸಾಧ್ಯ ಕಲಿಯೋದು
ಅನುಭವಿಗಳ ಮಾತು ಕೇಳು ಒಳ್ಳೆಯದಂತಾರೆ
ಕೇಳಿದರೆ ತಿಳಿಯೋದಲ್ಲ ಬಾಳು ಅನ್ನೋದು
ಒಂದು ದಿನ ಕಳೆಯೋಕೆ
ಒಂದು ದಿನ ನಲಿಯೋಕೆ
ಎಲ್ಲ ಮೆಲುಕು ಹಾಕುತ್ತ
ಒಂದು ದಿನ ಹ ಹ ಹೋಗೋಕೆ
ಬಯಸಿದ್ದೆಲ್ಲ ಎಂದೂ ನಮ್ಮ ಕೈಗೆ ಸಿಕ್ಕದು
ನಾವು ತಂದ ಪುಣ್ಯ ಎಷ್ಟೊ ಅಷ್ಟೇ ನಮ್ಮದು
ಚಿಂತಿಸಬೇ..ಡ ಮನವೇ
ದಾರಿ ಸಾಗಿಸು
ಬಾಳಿನ ಬೀದಿ ಏರುಪೇರು..
ಇಲ್ಲಿ ಸಾಗಲೇಬೇಕು ನಮ್ಮ ತೇ...ರು...
ಬಾಳಿನ ಬೀದಿ ಏರುಪೇರು....