menu-iconlogo
logo

Puttamalli Puttamalli

logo
가사
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರೆಟ್ಟೆಯಲಿ ಸೊಂಟದಲಿ ವಂಕಿಡಾಬಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕು ಮೊಳ ಸೀರೆ ಎಂಟು ಮೊಳ

ಕಣ್ಣು ಕಾಸಗಲ ಆಸೆ ಊರಗಲ

ಇದು ಅವರೆಯ ಹೂವೋ

ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರಂಗನಾಥ್

ನಮ್ಮೊರು ತಮ್ಮೊರು ಅನ್ನುವಹಾಗೆ

ಈ ಸೀರೆಗೆ ಓರಗೆ ಈ ನೆರಿಗೆಯೇ

ಚಿನ್ನಾ ನೀ ರನ್ನಾ ನೀ ಅನ್ನಲು ನಾನು

ಈ ಕಿವಿಗೆ ಗಿಲಕಿ ಈ ಜುಮಕಿಯೇ

ಪಟ್ಟಣದ ಈ ಬೊಂಬೆ ಅರಿಶಿಣ ಹಚ್ಚವಳೆ

ಮುತ್ತಿನಂಥ ಈ ರಾಣಿ ಮುತ್ತು ರತ್ತು ಮೆಚ್ಚವಳೆ

ನಾಚಿ ನೀರಾಗಿ ಹೊಳೆ ಆಗವ್ಳೆ

ಮೈ ಕಳೇಗೇರವ್ಳೆ

ಬಾ ದೃಷ್ಟಿ ತೆಗಿ ದೃಷ್ಟಿ ತೆಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರೆಟ್ಟೆಯಲಿ ಸೊಂಟದಲಿ ವಂಕಿಡಾಬಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕು ಮೊಳ ಸೀರೆ ಎಂಟು ಮೊಳ

ಕಣ್ಣು ಕಾಸಗಲ ಆಸೆ ಊರಗಲ

ಇದು ಅವರೆಯ ಹೂವೋ

ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಮುಂಜಾನೆ ಮುದ್ದಾಗಿ ಬೀಸುವ ಗಾಳಿ

ಈ ಮಡದಿ ನನ್ನಾ ಈ ಮನಸಲಿ

ಗೋಮಾತೆ ಎದೆಯಲ್ಲಿ ಉಕ್ಕಿದ ಹಾಲು

ಈ ಮಡದಿ ನನ್ನಾ ಈ ಮನೆಯಲಿ

ಚೆಂದದಾ ಜೋಡೆತ್ತು ನಾವು ಬಾಳ ನೊಗದಲ್ಲಿ

ಅಂದದಾ ರಂಗೋಲಿ ನಾವು ಮನೆ ಮೊಗದಲ್ಲಿ

ಹೆಣ್ಣು ಮಣ್ಣೆಲ್ಲ ವರ ಸಿಕ್ಕಂತೆ

ನಮ್ಮ ಪುಣ್ಯ ಇದ್ದಂತೆ

ಬಾ ದೃಷ್ಟಿ ತೆಗಿ ದೃಷ್ಟಿ ತೆಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರೆಟ್ಟೆಯಲಿ ಸೊಂಟದಲಿ ವಂಕಿಡಾಬಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕು ಮೊಳ ಸೀರೆ ಎಂಟು ಮೊಳ

ಕಣ್ಣು ಕಾಸಗಲ ಆಸೆ ಊರಗಲ

ಇದು ಅವರೆಯ ಹೂವೋ

ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ

ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ

Puttamalli Puttamalli - Manu/Chithra - 가사 & 커버