ರಂಗೇರಿದೆ ಈ ಮನಸಿನಾ ಬೀದಿ
ನಡೆದೇ ನೀ ಹಾಗೆ ಅನುರಾಗಿಯಾಗಿ
ಕಾರಣ ಈ ಕಣ್ಮಣಿ ಹೂನಗೆ ರೀ
ನಲುಗಿ ಹಾಯೆಂದಿದೆ ನನ್ನೀ ಹೃದಯ
ಹಿನ್ನಲೆ ಸಂಗೀತದೆ ಕಾಡುವೆ ಸರಿಯಾ
ನಿದಿರೆ ಮದಿರೆ ನಶೆಯಾ ಮೀರೆಯಾ
ಮಾತೆ ಮರೆತಹಾಗಿದೆ ಇವಳು ಎದುರಿದ್ದರೆ
ಮಿಂಚು ಕಣ್ಮಿಂಚಿನಾಕಥೆ ಅರ್ಥವೇ ಆಗದೆ
ಅಂತೇ ಕಂತೆಸಂತೆಲಿ ನೆನೆದೂ ನಾ ನಿನ್ನನೆ
ನಿಂದೆ ಕಣ್ಣ ದಾಳೀಯದೆ ಏನಿದೂ ಸೂಚನೆ
ತಕಧೀಂ ಧೀಂ ಧೀಂ ಧೀಂ ತಕಧೀಂ
ಅಂತ ಹೇಳಿದೆ ಏನನು
ಇದನು ಅನುವಾದಿಸೆಯ ಯಾರಿಗೂ ನೀ ಹೇಳದೆ
ಹೃದಯದಲ್ಲೀನ ಗಲ್ಲೀಲಿ ರಂಗೋಲಿ ರಂಗೇರಿದೆ
ಮರೆತು ಹೋದ ಚುಕ್ಕಿಗಳ ನೀ ಪೂರ್ತಿ ಮಾಡಿದೆ
ಅರೆರೆರೆರೆ ಅಮಲು ಹೆಚ್ಚಾಗಿ ಅದಕೆ ನೀತಾನೆ ರೂವಾರಿ
ಕರೆದರೆ ಕಳೆದೆ ನಾ ಹೋಗಿ ದಿನಚರಿ ನೀನಾಗಿರುವೆ ಚೋರಿ
ರಂಗೇರಿದೆ ಈ ಮನಸಿನಾ ಬೀದಿ
ನಡೆದೇ ನೀ ಹಾಗೆ ಅನುರಾಗಿಯಾಗಿ
ಕಾರಣ ಈ ಕಣ್ಮಣಿ ಹೂನಗೆ ರೀ
ನಲುಗಿ ಹಾಯೆಂದಿದೆ ನನ್ನೀ ಹೃದಯ
ಹಿನ್ನಲೆ ಸಂಗೀತದೆ ಕಾಡುವೆ ಸರಿಯಾ
ನಿದಿರೆ ಮದಿರೆ ನಶೆಯಾ ಮೀರೆಯಾ
ಮಾತೆ ಮರೆತಹಾಗಿದೆ ಇವಳು ಎದುರಿದ್ದರೆ
ಮಿಂಚು ಕಣ್ಮಿಂಚಿನಾಕಥೆ ಅರ್ಥವೇ ಆಗದೆ
ಅಂತೇ ಕಾಂತೆ ಸಂತೆಲಿ ನೆನೆದೂ ನಾ ನಿನ್ನನೆ
ನಿಂದೆ ಕಣ್ಣ ದಾಳೀಯದೆ ಏನಿದೂ ಸೂಚನೆ