ಚಿತ್ರ: ಪರಶುರಾಮ್ (1989)
ಗಾಯಕರು: ಡಾ. ರಾಜಕುಮಾರ್
ಸಂಗೀತ : ಹಂಸಲೇಖ
ಸಾಹಿತ್ಯ: ಚಿ. ಉದಯಶಂಕರ್
S1: ನಗುತ ನಗುತ ಬಾಳೂ... ನೀನು
ನೂರು ವರುಷಾ
ಎಂದು ಹೀಗೆ ಇರಲೀ... ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು....ಉ ಉ
ದೇವರ ರೂಪ ನೀನೆ ಮಗು...ಉ ಉಉ
S2: ನಗುತ ನಗುತ ಬಾಳೂ... ನೀನು
ನೂರು ವರುಷಾ
ಎಂದು ಹೀಗೆ ಇರಲೀ... ಇರಲಿ
ಹರುಷ ಹರುಷಾ
Both: ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
Music
NandaKumar G
On: 12 06 2019
S1: ಹೂವು ನಕ್ಕಾಗ ತಾನೇ ... ಏ ಏ ಏ
ಅಂದ ಇರುವುದು....ಉ ಉ ಉ
ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ ... ಏ ಏ ಏ
ಬೆಳಕು ಬರುವುದೂ....ಉ ಉ ಉ
ಕಡಲು ಕುಣಿವುದೂ
ಸೂರ್ಯನಾಡೊ ಜಾರೊ ಆಟ
ಬಾನು ನಗಲೆಂದೆ
ಬೀಸೊ ಗಾಳಿ ತೂಗೊ ಪೈರು
ಭೂಮಿ ನಗಲೆಂದೆ
ದೇವರು ತಂದ ಸೃಷ್ಟಿಯ ಅಂದ
ಎಲ್ಲರು ನಗಲೆಂದೆ... ಏ ಏ
S2: ನಗುತ ನಗುತ ಬಾಳೂ... ನೀನು
ನೂರು ವರುಷಾ
ಎಂದು ಹೀಗೆ ಇರಲೀ... ಇರಲಿ
ಹರುಷ ಹರುಷಾ
Music
S2: ಆಕಾಶದಾಚೆ ಎಲ್ಲೋ... ಓ ಓ ಓ
ದೇವರಿಲ್ಲವೋ.....ಓ ಓ ಓ
ಹುಡುಕಬೇಡವೋ
ಆ ಮಾಯಗಾರ ತಾನೂ....ಉ ಉ ಉ
ಗಿರಿಯಲಿಲ್ಲವೋ.....ಓ ಓ ಓ
ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ
ತಂಪಿನಲ್ಲು ಕಂಪಿನಲ್ಲು ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗೀ...
S1: ನಗುತ ನಗುತ ಬಾಳೂ... ನೀನು
ನೂರು ವರುಷಾ
ಎಂದು ಹೀಗೆ ಇರಲೀ... ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
S2: ನಗುತ ನಗುತ ಬಾಳೂ... ನೀನು
ನೂರು ವರುಷಾ
ಎಂದು ಹೀಗೆ ಇರಲೀ... ಇರಲಿ
ಹರುಷ ಹರುಷಾ
Both: ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
NandaKumar G