menu-iconlogo
huatong
huatong
avatar

Rayaru Bandaru

Rathnamala prakashhuatong
sabrefan18huatong
가사
기록
ರತ್ನಮಾಲ ಪ್ರಕಾಶ್

ರಾಯರು ಬಂದರು ಮಾವನ ಮನೆಗೆ

ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ

ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು

ರಾಯರು ಬಂದರು ಮಾವನ ಮನೆಗೆ

ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ

ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು

ಮಾವನ ಮನೆಯಲಿ ಮಲ್ಲಿಗೆ ಹೂಗಳ

ಪರಿಮಳ ತುಂಬಿತ್ತು

ಬಾಗಿಲ ಬಳಿ ಕಾಲಿಗೆ ಬಿಸಿನೀರಿನ

ತಂಬಿಗೆ ಬಂದಿತ್ತು

ಒಳಗಡೆ ದೀಪದ ಬೆಳಕಿತ್ತು

ಘಮಘಮಿಸುವ ಮೃಷ್ಟಾನ್ನದ ಭೋಜನ

ರಾಯರ ಕಾದಿತ್ತು

ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು

ಭೂಮಿಗೆ ಸ್ವರ್ಗವೆ ಇಳಿದಿತ್ತು

ಚಪ್ಪರಗಾಲಿನ ಮಂಚದ

ಮೇಗಡೆ ಮೆತ್ತನೆ ಹಾಸಿತ್ತು

ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ

ಚಿತ್ರದ ಹೂವಿತ್ತು

ಪದುಮಳು ಹಾಕಿದ ಹೂವಿತ್ತು

ಚಿಗುರೆಲೆ ಬಣ್ಣದ ಅಡಿಕೆಯ ತಂದಳು

ನಾದಿನಿ ನಗುನಗುತಾ

ಬಿಸಿಬಿಸಿ ಹಾಲಿನ ಬಟ್ಟಲು ತಂದರು

ಅಕ್ಕರೆಯಲಿ ಮಾವ

ಮಡದಿಯ ಸದ್ದೇ ಇರಲಿಲ್ಲ

ಮಡದಿಯ ತಂಗಿಯ ಕರೆದಿಂತೆಂದರು

ಅಕ್ಕನ ಕರೆಯಮ್ಮಾ

ಮೆಲುದನಿಯಲಿ ನಾದಿನಿ ಇಂತೆಂದಳು

ಪದುಮಳು ಒಳಗಿಲ್ಲ

ನಕ್ಕಳು ರಾಯರು ನಗಲಿಲ್ಲ

ರಾಯರು ಬಂದರು ಮಾವನ ಮನೆಗೆ

ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ

ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು

ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ

ಕಣ್ಣನು ಕಡಿದರು ನಿದ್ದೆಯು ಬಾರದು

ಪದುಮಳು ಒಳಗಿಲ್ಲ, ಪದುಮಳ ಬಳೆಗಳ ದನಿಯಿಲ್ಲ

ಬೆಳಗಾಯಿತು ಸರಿ ಹೊರಡುವೆನೆಂದರು

ರಾಯರು ಮುನಿಸಿನಲಿ

ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ

ಯಾರಿಗೆ ಎನ್ನಲು ಹರುಷದಲಿ

ಪದುಮಳು ಬಂದಳು

ಪದುಮಳು ಬಂದಳು

ಪದುಮಳು ಬಂದಳು ಹೂವನು ಮುಡಿಯುತ

ರಾಯರ ಕೋಣೆಯಲಿ…..

ಪದುಮಳು ಬಂದಳು ಹೂವನು ಮುಡಿಯುತ

ರಾಯರ ಕೋಣೆಯಲಿ……

ರಾಯರ ಕೋಣೆಯಲಿ……

ರಾಯರ ಕೋಣೆಯಲಿ....

ರಾಯರ ಕೋಣೆಯಲಿ....

Rathnamala prakash의 다른 작품

모두 보기logo