menu-iconlogo
huatong
huatong
avatar

Mutthu Mutthu Neera Haniya

S. P. Balasubrahmanyam/K. S. Chithrahuatong
shynoacehuatong
가사
기록
ಮುತ್ತು ಮುತ್ತು ನೀರ ಹನಿಯ ತಾಂ ತನನನಂ

ಉಲ್ಲಾಸದ ಮೇರೆ ಮೀರಿ ಧೀಂತನಕಧೀ..

ಮುತ್ತು ಮುತ್ತು ನೀರ ಹನಿಯ ತಾಂ ತನನನಂ

ಉಲ್ಲಾಸದ ಮೇರೆ ಮೀರಿ ಧೀಂತನಕಧೀ..

ಆಹಾ ಇಂಥ ಸ್ಪಂದನಕಿಲ್ಲಿ ಮೂಲ ಋತುಮಾನ..

ಒಹೋ ಇದೇನಿಂಥ ಹೊಸ ಥರ ಚೈತ್ರ ಋತುಗಾನ.

ಮೈಮನವೇ.. ಋತು ಋತುಗಳ ಚೇತನ

ಮುತ್ತು ಮುತ್ತು ನೀರ ಹನಿಯ ತಾಂ ತನನನಂ

ಉಲ್ಲಾಸದ ಮೇರೆ ಮೀರಿ ಧೀಂತನಕಧೀ..

ಋತುಗಳ ಆ ಬಂಡಿಯ ಮೇಲೆ

ಈ ಬಾಳ ಪಯಣವಿದೆ

ಬಾಳಿನ ಈ ಪಯಣಗಳನ್ನು

ಪ್ರೀತಿಯೆ ನಡೆಸುತಿದೆ

ಮಿನುಮಿನುಗೊ ಮಿಂಚುಗಳಂತೆ

ಬಾಳಲ್ಲಿ ತಿರುವು ಇದೆ

ಒಂದೊಂದು ತಿರುವುಗಳಲ್ಲೂ

ಶೃಂಗಾರ ಸರಸವಿದೆ

ಆಹಾ ಎಲ್ಲಾ ಮನಸೂ..ಊ...ಊ...

ಆಹಾ ಎಲ್ಲಾ ಮನಸೂ ಆಹ್ಲಾದಮಯವಿಲ್ಲಿ

ಒ ಹೋ ಹೋ

ಎಲ್ಲ ಹೃದಯ ತುಂಬೊ ಈ ಸ್ನೇಹ ಜೊತೆಯಲ್ಲಿ

ಇಲ್ಲಿ ತುಟಿಪಿಟಿ ಕೆಂಡದ ಟಿಟಪಟ ಪುಟಿಯುವ

ತುಂತುರು ಸಡಗರದಲ್ಲಿ ನಾವಿಲ್ಲಿ

ಮುತ್ತು ಮುತ್ತು ನೀರ ಹನಿಯ ತಾಂ ತನನನಂ

ಉಲ್ಲಾಸದ ಮೇರೆ ಮೀರಿ ಧೀಂತನಕಧೀ..

ಆಹಾ ಇಂಥ ಸ್ಪಂದನಕಿಲ್ಲಿ ಮೂಲ ಋತುಮಾನ..

ಒಹೋ ಇದೇನಿಂಥ ಹೊಸ ಥರ ಚೈತ್ರ ಋತುಗಾನ..

ಮೈಮನವೇ.. ಋತು ಋತುಗಳ ಚೇತನ

ಮುತ್ತು ಮುತ್ತು ನೀರ ಹನಿಯ ತಾಂ ತನನನಂ

ಉಲ್ಲಾಸದ ಮೇರೆ ಮೀರಿ ಧೀಂತನಕಧೀ...

ತಿರು ತಿರುಗೊ ಭೂ..ಮಿಯಿಂದ

ಎಲ್ಲ ಮನಸು ತಿರುಗುತಿದೆ

ತಿರು ತಿರುಗೊ ಮನಸುಗಳೊಳಗೆ

ಆಸೆಗಳು ತಿರುಗುತಿದೆ

ತಿರುಗಾಡೊ ಮನಸುಗಳೆಲ್ಲ

ಒಂದೆಡೆಯೇ ನಿಲ್ಲುತಿದೆ

ಅದು ನಿಲ್ಲೊ ಜಾಗದ ಹೆಸರು

ಸವಿ ಪ್ರೀತಿ ಅಲ್ಲವೇ

ಒಹೋ ಎಂಥ ಸಮಯಾ ಆ..ಆ..ಆ..

ಒಹೋ ಎಂಥ ಸಮಯಾ

ಆತ್ಮೀಯವಾಯ್ತಿಲ್ಲಿ

ಒ ಹೋ ಹೋ

ಇಲ್ಲಿ ಎಲ್ಲ ಹೃದಯ ಬೆಳಕಾಗಿ ಹೋಯ್ತಿಲ್ಲಿ

ಇಲ್ಲಿ ಜುಳುಜುಳು ಹನಿಯಿಸಿ

ಪುಳಕಿಸಿ ಪುಸಯಿಸಿ ಕುಣಿಸೊ

ಸಡಗರದಲ್ಲಿ ನಾವಿಲ್ಲಿ

ಮುತ್ತು ಮುತ್ತು ನೀರ ಹನಿಯ ತಾಂ ತನನನಂ

ಉಲ್ಲಾಸದ ಮೇರೆ ಮೀರಿ ಧೀಂತನಕಧೀ..

ಆಹಾ ಇಂಥ ಸ್ಪಂದನಕಿಲ್ಲಿ ಮೂಲ ಋತುಮಾನ..

ಒಹೋ ಇದೇನಿಂಥ ಹೊಸ ಥರ ಚೈತ್ರ ಋತುಗಾನ

ಮೈಮನವೇ.. ಋತು ಋತುಗಳ ಚೇತನ

ಮುತ್ತು ಮುತ್ತು ನೀರ ಹನಿಯ ತಾಂ ತನನನಂ

ಉಲ್ಲಾಸದ ಮೇರೆ ಮೀರಿ ಧೀಂತನಕಧೀ..

S. P. Balasubrahmanyam/K. S. Chithra의 다른 작품

모두 보기logo