menu-iconlogo
huatong
huatong
s-p-balasubrahmanyammalgudi-subha-nim-kade-sambarandre-cover-image

Nim Kade Sambarandre

S. P. Balasubrahmanyam/Malgudi Subhahuatong
ಮಂಜುನಾಥ್🕊️ಯಾದವ್💞MHK💞huatong
가사
기록
ಸುಸ್ವಾಗತ

ಮಂಜುನಾಥ್ ಯಾದವ್

F)ಆಆಆಆ....

M)ವ್ವಾ

F)ವ್ವಾ

M)ವ್ವಾ

F)ವ್ವಾ

F)ನಿಮ್ಕಡಿ ಸಾಂಬಾರ್ ಅಂದ್ರೆ ನಮ್ಕಡಿ ತಿಳಿಯೋದಿಲ್ಲ ನಮ್ಕಡಿ ಡಾಂಬರ್ ಅಂದ್ರೆ ನಿಮ್ಕಡಿ ತಿಳಿಯೋದಿಲ್ಲ

ನಿಮ್ಕಡಿ ಶಿರಾ ಅಂದ್ರೆ ತಲೆ ಅಂತ ತಿಳ್ಕೊತಿರಿ ನಮ್ಕಡಿ ಶಿರಾ ಅಂದ್ರೆ ಕೇಸರಿಬಾತ್ ಅನ್ಕೊತಿವಿ

ಎಂತದು ಎಂತದು ಹಾಡೋದೆಂತ ಕೂಡೋದೆಂತ ಕುಣಿಯೋದೆಂತ

ಹ್ಯಾಂಗಪ್ಪ ಹ್ಯಾಂಗಪ್ಪ ಹಾಡೋದ್ಯಾಂಗ ಕೂಡೋದ್ಯಾಂಗ ಕುಣಿಯೋದ್ಯಾಂಗ

M)ಬೆಳಗಾವಿಯಾದರೇನು ಬೆಂಗಳೂರು ಆದರೇನು ನಗಬೇಕು ನಾವು ಮೊದಲು ಮಾತಾಡಲು ಎದೆ ಭಾಷೆಯ ಅರಿವಾಗಲು ...

F)ಆಆಆಆ..

M)ಹುಬ್ಬಳ್ಳಿಯಾದರೇನು ಭದ್ರಾವತಿಯಾದರೇನು ಬೆರಿಬೇಕು ನಾವು ಮೊದಲು ನಲಿದಾಡಲು ನಾವೆಲ್ಲರೂ ಸರಿ ಹೋಗಲು...

F)ಆಆಆಆ....

ಮಂಜುನಾಥ್ ಯಾದವ್

F)ಬೆಂಗ್ಳೂರಲ್ಲಿ ಬೊಂಡ ಅಂದ್ರೆ ಆಲೂಗಡ್ಡೆ ಉಂಡೆಯಂತೆ ಮಂಗ್ಳೂರಲ್ಲಿ ಬೊಂಡ ಅಂದ್ರೆ ಎಳನೀರ ಕಾಯಿಯಂತೆ

ಗದಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ ಮೈಸೂರಿನಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ

M)ಮೈಸೂರಲಿ ಹೊಲಗದ್ದೆಗೆ ಭೂತಾಯಿ ಅಂತಾರೆ ಮಂಗಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ

F)ನಿಮ್ಕಡೆ ಬಂಗಿ ಅಂದ್ರೆ ಹೊಗೆಸೊಪ್ಪು ಹಚ್ಚುವುದು ಸೇದುವುದು ನಮ್ಕಡಿ ಬಂಗಿ ಅಂದ್ರ ಚೊಕ್ಕ ಮಾಡೋ ಮಾನವರ ನಾಮವದು

M)ಸಾವಿರ ಹೂವ ಎದೆಹನಿ ಬೇಕು.. ಜೇನಿನ ಗೂಡಾಗಲು.. ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು...

F)ಆಆಆಆ....

M)ಗುಡಿಗೆರಿ ಆದರೇನು ಮಡಿಕೇರಿಯಾದರೇನು ದುಡಿಬೇಕು ನಾವು ಮೊದಲು ದಣಿಯಾಗಲು ಬಂಗಾರದ.. ಗಣಿಯಾಗಲು ...

F)ಆಆಆಆ....

ಮಂಜುನಾಥ್ ಯಾದವ್

F)ಯಾವ ಭಾಷೆ ದೊಡ್ಡದು ಯಾವುದು ಚಿಕ್ಕದು ಯಾವ ಭಾಷೆ ಕಲಿಯೋದು ಯಾವುದ್ ಬಿಡೋದು

M)ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು ನೂರಾರರು ಗುರಿಯಿಲ್ಲದ ನೂರಾರು ಕವಲುಗಳು

ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು ಕನ್ನಡಕ್ಕೆ ಅಲ್ಲಿಹುದು ನಾಲ್ಕನೆಯ ದೊಡ್ಡ ಸ್ಥಾನಮಾನಗಳು

ಕನ್ನಡ ನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ.. ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆಯಿದೆ...

F)ಆಆಆಆ...

B)ಲಾಲಾಲಾಲಾ ಲಲಾಲ ಲಾಲಾಲಾಲಾ ಲಲಾಲ ಲಾಲಾಲಾಲಾ ಲಲಾಲ ಲಾಲಲಾಲ ಲಾಲಲಲ

F)ಆಆಆಆ...

B)ಲಾಲಾಲಾಲಾ ಲಲಾಲ ಲಾಲಾಲಾಲಾ ಲಲಾಲ ಲಾಲಾಲಾಲಾ ಲಲಾಲ ಲಾಲಲಾಲ ಲಾಲಲಲ

F)ಆಆಆಆ...

ಧನ್ಯವಾದಗಳು

ಮಂಜುನಾಥ್ ಯಾದವ್

S. P. Balasubrahmanyam/Malgudi Subha의 다른 작품

모두 보기logo