menu-iconlogo
huatong
huatong
avatar

Nammooru Mysooru

S. P. Balasubrahmanyam/S Janakihuatong
mscharliesangelhuatong
가사
기록
ಸಂಗೀತ: ರಾಜನ್ ನಾಗೇಂದ್ರ

ಗಾಯನ:ಎಸ್ಪಿ.ಬಿ.ಮತ್ತು ಎಸ್.ಜಾನಕಿ

ಅಪ್ಲೋಡ್: ರವಿ ಎಸ್ ಜೋಗ್

ನಮ್ಮೂರು ಮೈಸೂರು,ನಿಮ್ಮೂರು ಯಾವೂರು

ನಮ್ಮೂರು ಮೈಸೂರು,ನಿಮ್ಮೂರು ಯಾವೂರು

ಎಲ್ಲಿಂದ ಬಂದೆ ಹೇಳು ಜಾಣೆ...ನಿನ್ನಂಥ

ಚೆಲುವೆ ಎಲ್ಲೂ ಕಾಣೆ...

ಜೊತೆಯಲಿ ಬಂದರೆ ಇಲ್ಲವೆ ತೊಂದರೆ ನನ್ನಾಣೆ...

ಜೊತೆಯಲಿ ಬಂದರೆ ಇಲ್ಲವೆ ತೊಂದರೆ

ನಿನ್ನಾಣೆ, ಕೇಳು ಹೆಣ್ಣೆ

ಎಲ್ಲಿಂದ ಬಂದೆ ಹೇಳು ಜಾಣೆ...ನಿನ್ನಂಥ

ಚೆಲುವೆ ಎಲ್ಲೂ ಕಾಣೆ...

ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು

ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು ಎಲ್ಲಿಂದ

ಬಂದರೇನು ನಾನು ನಿಮ್ಮವಳೆ ಆದ ಮೇಲೆ ಇನ್ನೇನು...

ಕುಳ್ಳನ ಆಸರೆ ಬಯಸಿದೆ ಬಾ ದೊರೆ ನಂಬುವೆಯಾ....

ಕುಳ್ಳನ ಆಸರೆ ಬಯಸಿದೆ ಬಾ

ದೊರೆ ನಂಬುವೆಯಾ, ನನ್ನ ನೀನು

ಎಲ್ಲಿಂದ ಬಂದರೇನು ನಾನು...ನಿಮ್ಮವಳೆ

ಆದ ಮೇಲೆ ಇನ್ನೇನು...

ಚಾಮುಂಡಿ ಬೆಟ್ಟಾವ ಹತ್ತಿಸುವೆ

ಬಾರೆ..ಕಾವೇರಿ ನದಿಯಾಗೆ ಈಜಿಸುವೆ ಬಾರೆ..

ಚಾಮುಂಡಿ ಕಾವೇರಿ ಕಂಡಿರುವೆ ನಾನು

ಬೇಲೂರ ಗುಡಿಯನ್ನು ತೋರುವೆಯಾ ನೀನು?

ಬೇಲೂರು ಒಂದೆ ಏಕೆ, ಕೊಲ್ಲೂರ

ಬಿಟ್ಟೆ ಏಕೆ ಕನ್ನಡ ನಾಡ ಚಿನ್ನದ ನಾಡ

ಸುತ್ತಿಸಿ ಬರುವೆ ನಿನ್ನನ್ನು ನಮ್ಮೂರು

ಮೈಸೂರು, ನಿಮ್ಮೂರು ಆ ಯಾ..ವೂರು

ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು

ಹೋ ಎಲ್ಲಿಂದ ಬಂದೆ ಹೇಳು

ಜಾಣೆ...ಹೆ.ಹೆ..ನಿನ್ನಂಥ ಚೆಲುವೆ

ಎಲ್ಲೂ ಕಾಣೆ..ಅಹಾ..ಹಾ...ಹಾ

ಎಲ್ಲಿಂದ ಬಂದರೇನು ನಾನು

ನಿಮ್ಮವಳೆ ಆದ ಮೇಲೆ ಇನ್ನೇನು....

ಮಾರುದ್ದ ಮಾತೋನೆ ಮೆಚ್ಚಿದೆ

ನಿನ್ನನ್ನು,ಚೋಟುದ್ದ ನಿಂತೋನೆ

ಒಪ್ಪಿದೆ ನಿನ್ನನ್ನು

ಹೂವಂತ ಮೊಗದೋಳೆ ಮೆಚ್ಚಿದೆ ನಿನ್ನನ್ನು

ಹಾವಂತ ಜೆಡೆಯೋಳೆ ಒಪ್ಪಿದೆ ನಿನ್ನನ್ನು

ನಿನ್ನಾಟ ಬಲ್ಲೆ ನಾನು, ಕಿಲಾಡಿ ಕುಳ್ಳ ನೀನು

ತುಂಟನ ಹಾಗೆ ತಂಟೆಯ ಮಾಡಿ

ಕೆರಳಿಸ ಬೇಡ ನನ್ನನ್ನು

ಅರೆ.ರೆ.ರೆ..ನಮ್ಮೂರು

ಮೈಸೂರು, ನಿಮ್ಮೂರು ಹಾ ಯಾವೂರು

ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು...

ಆ..ಆ..ಎಲ್ಲಿಂದ ಬಂದೆ ಹೇಳು

ಜಾಣೆ....ನಿನ್ನಂಥ ಚೆಲುವೆ ಎಲ್ಲೂ ಕಾಣೆ....

ಆ ಎಲ್ಲಿಂದ ಬಂದರೇನು ನಾನು

ನಿಮ್ಮವಳೆ ಆದ ಮೇಲೆ ಇನ್ನೇನು

ರವಿ ಎಸ್ ಜೋಗ್

S. P. Balasubrahmanyam/S Janaki의 다른 작품

모두 보기logo