menu-iconlogo
huatong
huatong
avatar

Kambada myalina

Sangeetha Kattihuatong
pushyapotnishuatong
가사
기록
ಸಂಗೀತ: ಸಿ. ಅಶ್ವಥ್

ಗಾಯನ: ಸಂಗೀತ ಕಟ್ಟಿ

ಚಲನಚಿತ್ರ: ನಾಗಮಂಡಲ

ಅಪ್ಲೋಡ್ ಡಾ ವಿಶಾಲ್ ನಾಗರಾಜ್

೧೭ ೨ ೨೦೨೧

ಕಂಬದಾ ಮ್ಯಾಲಿನ ಗೊಂಬಿಯೇ

ನಂಬಲೇನ ನಿನ್ನ ನಗಿಯನ್ನಾ

ಭಿತ್ತಿಯಾ ಮ್ಯಾಲಿನ ಚಿತ್ತಾರವೇ

ಚಿತ್ತ ಗೊಟ್ಟ ಹೇಳ ಉತ್ತಾರವಾ

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ

ಮಬ್ಬು ಹರಿಯುವುದೇ...ನಾ ಹಬ್ಬವಾಗುವುದೇ..ನಾ

ಕಂಬದಾ ಮ್ಯಾಲಿನ ಗೊಂಬಿಯೇ

ನಂಬಲೇನ ನಿನ್ನ ನಗಿಯನ್ನಾ

ಭಿತ್ತಿಯಾ ಮ್ಯಾಲಿನ ಚಿತ್ತಾರವೇ

ಚಿತ್ತ ಗೊಟ್ಟ ಹೇಳ ಉತ್ತಾರವಾ

ಸಂಗೀತ

ನೀರೊಲೆಯ ನಿಗಿ ಕೆಂಡ ಸತ್ಯವೇ

ಈ ಅಭ್ಯಂಜನವಿನ್ನೂ ನಿತ್ಯವೇ

ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ

ನಿನ್ನ ವಾಸನೀ ಹರಡಿರಲಿ ಹೀಗೆಯೇ

ನೀರೊಲೆಯ ನಿಗಿ ಕೆಂಡ ಸತ್ಯವೇ

ಈ ಅಭ್ಯಂಜನವಿ..ನ್ನೂ ನಿತ್ಯವೇ

ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ

ನಿನ್ನ ವಾಸನೀ ಹರಡಿರಲಿ ಹೀಗೆಯೇ

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ

ಮಬ್ಬು ಹರಿಯುವುದೇ..ನಾ ಹಬ್ಬವಾಗುವುದೇ..ನಾ

ಸಂಗೀತ

ಒಪ್ಪಿಸುವೆ ಹೂ ಹಣ್ಣು ಭಗವಂತ

ನೆಪ್ಪಿಲೆ ಹರಸುನಗಿ ಇರಲೆಂತ

ಕಪ್ಪುರವ ಬೆಳಗುವೆ ದೇವನೇ

ತಪ್ಪದೆ ಬರಲೆನ್ನ ಗುಣವಂತ

ಒಪ್ಪಿಸುವೆ ಹೂ ಹಣ್ಣು ಭಗವಂತ

ನೆಪ್ಪಿಲೆ ಹರಸುನಗಿ ಇರಲೆಂತ

ಕಪ್ಪುರವ ಬೆಳಗುವೆ ದೇವನೇ

ತಪ್ಪದೆ ಬರಲೆನ್ನ ಗುಣವಂತ

ಒಬ್ಬಳೇ.. ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ

ಮಬ್ಬು ಹರಿಯುವುದೇ...ನಾ ಹಬ್ಬವಾಗುವುದೇ..ನಾ

ಕಂಬದಾ ಮ್ಯಾಲಿನ ಗೊಂಬಿಯೇ

ನಂಬಲೇನ ನಿನ್ನ ನಗಿಯನ್ನಾ

ಭಿತ್ತಿಯಾ ಮ್ಯಾಲಿನ ಚಿತ್ತಾರವೇ

ಚಿತ್ತ ಗೊಟ್ಟ ಹೇಳ ಉತ್ತಾರವಾ

Sangeetha Katti의 다른 작품

모두 보기logo