ಓಂಕಾರದಿ ಕಂಡೆ ಪ್ರೇಮ ನಾದವ..
ಈ ತಾಣದಿ ತಂದೆ ನೀ ಶುಭೋದಯ..
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ..
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ..
ಅರಿಯೋ ಇನಿಯಾ.. ಒಲವ ಕರೆಯಾ..
ಓಂಕಾರದಿ ಕಂಡೆ ಪ್ರೇಮ ನಾದವ..
ಈ ತಾಣದಿ ತಂದೆ ನೀ ಶುಭೋದಯ..
ಮಧುರಾ ತಾಣ ಸ್ವರಗಳ ಸೇರಿ..
ಓ ಓ ಹೊ ಹೊ ಹೊ ಓ ಓ ಹೊ ಹೊ ಹೊ
ಜಲಲಾ ಧಾರೆ ಜಲದಲಿ ಜಾರಿ..
ಓ ಓ ಹೊ ಹೊ ಹೊ ಓ ಓ ಹೊ ಹೊ ಹೊ
ಆಕಾಶದಾಚೆ ಆ ಹೂ ನಗೆ..
ಆ ತಾರೆ ಏಕೆ ತಂಪೆರಿದೆ..
ಬಂದಾಗ ಅರಿವು ಇಲ್ಲಿ..
ತಂದೀತು ಒಲವು ಅಲ್ಲಿ..
ಅರಿಯೋ ಇನಿಯ.. ಒಲವ ನಿಧಿಯಾ..
ಓಂಕಾರದಿ ಕಂಡೆ ಪ್ರೇಮ ನಾದವ..
ಈ ತಾಣದಿ ತಂದೆ ನೀ ಶುಭೋದಯ..
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ..
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ..
ಅರಿಯೋ ಇನಿಯಾ.. ಒಲವ ಕರೆಯಾ..
ಓಂಕಾರದಿ ಕಂಡೆ ಪ್ರೇಮ ನಾದವ..
ನಿನದೆ ಧ್ಯಾನ ಹೃದಯದಿ ತೇಲಿ..
ಓ ಓ ಹೊ ಹೊ ಹೊ ಓ ಓ ಹೊ ಹೊ ಹೊ
ಲಯದಿ ರಾಗ ಅಲೆಗಳ ಬೀರಿ..
ಓ ಓ ಹೊ ಹೊ ಹೊ ಓ ಓ ಹೊ ಹೊ ಹೊ
ಈ ಗೀತೆಗಾದೆ ನೀ ಭಾವನ..
ಈ ಬಾಳಿಗಾದೆ ನೀ ಚೇತನಾ..
ಸಂಗೀತ ಸುಧೆಯ ತುಂಬಿ..
ಮಾಧುರ್ಯ ಮನದಿ ತಂದೆ..
ಅರಿಯೋ ಇನಿಯ.. ಒಲವ ಸವಿಯಾ..
ಓಂಕಾರದಿ ಕಂಡೆ ಪ್ರೇಮ ನಾದವ..
ಈ ತಾಣದಿ ತಂದೆ ನೀ ಶುಭೋದಯ..
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ..
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ..
ಅರಿಯೋ ಇನಿಯಾ.. ಒಲವ ಕರೆಯಾ..
ಓಂಕಾರದಿ ಕಂಡೆ ಪ್ರೇಮ ನಾದವ..
ಈ ತಾಣದಿ ತಂದೆ ನೀ ಶುಭೋದಯ..