M ಹೇ…ಗಗನ….
ಮಳೆಯಾ..ಹರಿಸಿ…
ತಿಳಿಸೇ.. ಬಿಡುವೆ… ಪ್ರೀತಿಯಾ…..
ಹೇ…ಧರಣಿ…
ಆವಿ… ಕಳಿಸಿ…..
ತಿಳಿಸಿ.. ಕೊಡುವೆ ಆಸೆಯಾ…..
ನಾ…. ತಿಳಿಯೆ
ತಿಳಿಸೋ ಬಗೆಯಾ
ಪ್ರೀತಿ ಹೇಗೆ ಹೇಳುತಾರೋ
ಜಗದಲಿ ಹೋಗಬೇಕು ಪಾಠಕಾಗಿ ಅವರಲಿ
F ಹೇ…. ಗಗನ..
ಮಳೆಯಾ… ಹರಿಸಿ…
ತಿಳಿಸೇ.. ಬಿಡುವೆ.. ಪ್ರೀತಿಯಾ…….
F ಎದುರು ನಡೆದು ಗಮನ ಸೆಳೆಯಲೆ.. ?
ಮರೆತ ಕವಿತೆ ನೆನಪು ಮಾಡಲೆ.. ?
ಮೊದಲು ಒಲವ ನಾನೆ ಹೇಳಲೇ..?
ಏನು ಮಾಡಲಿ………. ?
M ಬೊಗಸೆ ಹಿಡಿದು ನಗುವ ಕೇಳಲೆ ?
ಎದೆಯ ಬಗೆದು ಒಲವ ತೋರಲೆ ?
ಕೊನೆಯ ತನಕ ಜೊತೆಯ ಬೇಡಲೆ ?
ಹೇಗೆ ಹೇಳಲಿ….. ?
F ಓ...ಮುಂಗೈಯನು ಚಾಚಲೇನು ?
ಮುಂದಾಗಲೇ ಬೇಕು ನೀನು…..
M ಹಾ..… ಹೂವನ್ನು ನಾ ನೀಡಲೇನು. ?
ಹೂಂ ಅನ್ನಲೇಬೇಕು ನೀನು…
F ಈ…. ಒಲುಮೆ.. ಒಳಗೆ…. ಚಿಲುಮೆ
M ಹೇ... ಆಚೆ ಯಾಕೋ ಧಾರೆಯಾಗಿ ಬರದಿದೆ
ಗೌಪ್ಯವಾಗಿ ಸೌಮ್ಯವಾಗು ಇರದಿದೆ …
F ಹೇ.. ಗಗನ.. ಮಳೆಯಾ..ಹರಿಸಿ.. ತಿಳಿಸೇ.. ಬಿಡುವೆ.. ಪ್ರೀತಿಯಾ…….
M ಹೇ…ಧರಣಿ… ಆವಿ…ಕಳಿಸಿ… ತಿಳಿಸಿ..ಕೊಡುವೆ ಆಸೆಯಾ…..
F ಭಾಷೆ ಮರೆತ ಮೂಕ ಕೋಗಿಲೆ
ಅದಕೆ ತುಟಿಯ ಸನ್ನೆ ಕಲಿಸಲೆ ?
ಮಿಡಿವ ಹೃದಯ ನಿನಗೆ ಎನ್ನಲೇ?
ಮುದ್ದು ಮಾಡುತಾ...
M ಕನಸುಗಳಿಗು ಕಣ್ಣು ತೆರೆಯಲೇ?
ಬೆಳಕಿಗೊಂದು ಬಣ್ಣ ಬಳಿಯಲೆ ?
ಪುನಹ ಪುನಹ ಕೂಗಿ ಹೇಳಲೇ ?
ಮಧುರ ಸ್ವಾಗತ...
F ಓಓಓ ಮೊಗ್ಗಾಗಿಯೇ ಕಾದೆ ನಾನು
ಮುಂಜಾವಿನ ಪ್ರೀತಿಗಾಗಿ
M ಓ...ಸೂರ್ಯೋದಯಾ ಆಗಲೇನು.. ?
ತಂಗಾಳಿಯ ಸ್ಪರ್ಶಕಾಗಿ…
F ಈ ಒಲುಮೆ ಒಳಗೇ ಚಿಲುಮೆ
M ಹೇ...ಬಾನು ಭೂಮಿ ಹೇಳುವಾಗ ಒಲವನು
ನಾನು ಮಾತ್ರ ಮೂಕನಾಗಿ ಉಳಿದೆನು
F ಹೇ…ಗಗನ….
ಮಳೆಯಾ..ಹರಿಸಿ…
ತಿಳಿಸೇ.. ಬಿಡುವೆ… ಪ್ರೀತಿಯಾ…..
ಹೇ…ಧರಣಿ…
ಆವಿ… ಕಳಿಸಿ…....
ತಿಳಿಸಿ.. ಕೊಡುವೆ ಆಸೆಯಾ…..
*ಧನ್ಯವಾದಗಳು*