(F)ಮತ್ತೆ ನೋಡಬೇಡ ತಿರುಗಿ ನೀನು...
ಹಾಗೇ ಹೋಗು ಸುಮ್ಮನೆ...
ಮತ್ತೆ ನೋಡಬೇಡ ತಿರುಗಿ ನೀನು
ಹಾಗೇ ಹೋಗು ಸುಮ್ಮನೆ...
(M)ಚಿಗ್ರು ಮೀಸೆ ಬಂದಾಗ
ಎದುರು ಬಂದು ನಿಂತೊಳು
ನಿಂತು ನೋಡಿ ನಕ್ಕಾಗ
ಪ್ರೀತಿ ಕೊಟ್ಟು ಹೋದೊಳು
ಮತ್ತೇ ಬೇಡ ಅಂದ್ರೆ ಹೇಗೇಳು.
(F)ಅ.,ಮತ್ತೆ ನೋಡಬೇಡ ತಿರುಗಿ ನೀ..ನು
ಹಾಗೇ ಹೋಗು ಸುಮ್ಮನೆ...
(F)ಯಾರೋ ಹೇಳಿ ಕೊಟ್ಟೊರು
ನನ್ನೇ ಪ್ರೀತ್ಸು ಅಂದೊರು.
ಕೇಳಿ ಪ್ರೀತಿ ಮಾಡಬೇಕು ಅನಿಸಲಿಲ್ಲವೇ...
ಹೇಳು...
ನೀ...ಹೇಳು
(M)ಹೇಳಿ ಕೇಳದೆ ಹುಟ್ಟುವ
ಪ್ರೀತಿಯ ಸೃಷ್ಟಿಯ ಮೂಲ ಹುಡುಕಬಾರದು.
ಎಷ್ಟೆ ಕಾಲಗಳುರುಳಿ ಹೋದರು
ಪ್ರೀತಿಗೆ ಉತ್ತರವೆ ಸಿಗ.ದು..ಹು
ಪ್ರೀತಿ ಅಂದ್ರೆ ಹೀಗೆನೆ
ಕಂಡು ಕಾಣದ್ಹಾಗೆನೇ
ಹುಡುಕಬೇಡ ಪ್ರೀತಿ ಹುಟ್ಟನ್ನು
(F)ಮತ್ತೆ ನೋಡಬೇಡ ತಿರುಗಿ ನೀನು...
ಹಾಗೇ ಹೋಗು ಸುಮ್ಮನೆ...
(F)ಬ್ರಹ್ಮ ಗೀಚಿ ಹಣೆ ಬರಹ
ನನ್ನ ನಿನ್ನ ಬೇರೆ ಮಾಡಿ
ದೂರ ಇಟ್ಟರೆ ನೀ.ನು.. ಎನು ಮಾಡುವೆ...
ಹೇಳು.
ನೀ...ಹೇ.ಳು
(M)ನಿನ್ನ ಗಂಡನು ಗೀಚಿದ
ಸೃಷ್ಟಿಯೆ ತಪ್ಪೆಂದು ಶಾರದೆಗೆ ಹೇಳುವೆ
ಪ್ರೀತಿ ದೂರವ ಮಾಡುತ್ತ
ತಮಾಷೆ ನೋಡುವ ಬ್ರಹ್ಮ ಗೆ ಬೈಸುವೆ...ಹೇ..
ಏಳೇಳು ಜನ್ಕಕು
ನೀನೆ ನನಗೆ ಬೇಕೆಂದು
ಕಾಡಿಬೇಡಿ ವರವ ಪಡೆವೆ ನಾ..
(F)ಮತ್ತೆ ನೋಡಬೇಡ ತಿರುಗಿ ನೀನು...ಹು
ಹಾಗೇ ಹೋಗು ಸುಮ್ಮನೆ...