menu-iconlogo
huatong
huatong
Lirik
Rakaman
ಆಹಾ ಈ ಬೆದರು ಬೊಂಬೆಗೆ

ಜೀವ ಬಂದಿರುವ ಹಾಗಿದೆ

ಎಹೆ ಹೆಚ್ಚೇನು ಹೇಳಲಿ

ಹುಚ್ಚು ಹೆಚ್ಚಾಗಿ ಹೋಗಿದೆ

ನೆನಪಿನ ಜಾತ್ರೆಯಲಿ ಅಲೆದು, ನಾ

ಕನಸಿನ ಕನ್ನಡಿಯ ಕೊಳ್ಳಲೆ

ಹೇ ನಿನ್ನಯ ದಾರಿಯಲಿ ಅನುದಿನ,

ಹೃದಯದ ಅಂಗಡಿಯ ತೆರೆಯಲೆ

ಆಹಾ ಈ ಬೆದರು ಬೊಂಬೆಗೆ

ಜೀವ ಬಂದಿರುವ ಹಾಗಿದೆ

ಎಹೆ ಹೆಚ್ಚೇನು ಹೇಳಲಿ

ಹುಚ್ಚು ಹೆಚ್ಚಾಗಿ ಹೋಗಿದೆ

Music

ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ

ಮುಂಗೋಪವೇನು ನಿನ್ನ ಮೂಗುತಿಯೆ

ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ

ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ

ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ

ಕಳೆದು ಹೋಗಿರುವೆ ದಾರಿ ತಿಳಿಸುವೆಯ

ಆಹಾ ಈ ಬೆದರು ಬೊಂಬೆಗೆ

ಜೀವ ಬಂದಿರುವ ಹಾಗಿದೆ

ಎಹೆ ಹೆಚ್ಚೇನು ಹೇಳಲಿ

ಹುಚ್ಚು ಹೆಚ್ಚಾಗಿ ಹೋಗಿದೆ

Music

ಪ್ರೀತಿಗೆ ಯಾಕೆ ಈ ಉಪವಾಸ

ಯಾತಕ್ಕು ಇರಲಿ ನಿನ್ನ ಸಹವಾಸ

ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ

ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ

ನಂಬಿ ಕೆಟ್ಟಿರುವೆ ಏನು ಪರಿಹಾರ

ನಿನಗೆ ಕಟ್ಟಿರುವೆ ಮನದ ಗಡಿಯಾರ

ಆಹಾ ಈ ಬೆದರು ಬೊಂಬೆಗೆ

ಜೀವ ಬಂದಿರುವ ಹಾಗಿದೆ

ಎಹೆ ಹೆಚ್ಚೇನು ಹೇಳಲಿ

ಹುಚ್ಚು ಹೆಚ್ಚಾಗಿ ಹೋಗಿದೆ

ನೆನಪಿನ ಜಾತ್ರೆಯಲಿ ಅಲೆದು, ನಾ

ಕನಸಿನ ಕನ್ನಡಿಯ ಕೊಳ್ಳಲೆ

ಹೇ ನಿನ್ನಯ ದಾರಿಯಲಿ ಅನುದಿನ,

ಹೃದಯದ ಅಂಗಡಿಯ ತೆರೆಯಲೆ ಲೆ ಲೆ ಲೆ

Lebih Daripada ಅನುರಾಧ ಶ್ರೀರಾಮ್, ಉದಿತ್ ನಾರಾಯಣ್

Lihat semualogo

Anda Mungkin Suka

Ahah E Bedaru Gombe oleh ಅನುರಾಧ ಶ್ರೀರಾಮ್, ಉದಿತ್ ನಾರಾಯಣ್ - Lirik dan Liputan