ಅಂಬರದ ಅಂಜೂರದಿ ನೇಸರನು
ಅಂಗಯ್ಯಿಗೆ ಹತ್ತಿರವೀ ನೇಸರನು
ಕಾಸಗಲ ಕುಂಕುಮದಿ ನೇಸರನು
ಬಾನಗಲ ಬೀಗುವನೀ ನೇಸರನು
ಕಣ್ಣ ತುಂಬಾ ತುಂಬಿಕೊಂಡ
ಬಾಳ ತುಂಬಾ ಸೇರಿಕೊಂಡ
ಆಗುಂಬೆಯ ಪ್ರೇಮ ಸಂಜೆಯ
ಆಗುಂಬೆಯ ಪ್ರೇಮ ಸಂಜೆಯ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೇ ಓ ಗೆಳತಿಯೇ
ಓ ಗೆಳತಿಯೇ ಗೆಳತಿಯೇ
ಈ ದೇಹ ರಸಮಯ ಸದನ
ಈ ಮೇಹ ಮಧು ಸಂಗ್ರಹಣ
ಈ ದೇಹ ರಸಮಯ ಸದನ
ಈ ಮೇಹ ಮಧು ಸಂಗ್ರಹಣ
ಚಿರನೂತನ ರೋಮಾಂಚನ
ದಾಂಪತ್ಯದನುಸಂಧಾನ
ಮೆಲ್ಲುಸಿರೇ ಸವಿ ಗಾನ
ಎದೆ ಝಲ್ಲನೆ ಹೂವಿನ ಬಾಣ
ಆ ಮೋಡ ಬಾನಲ್ಲಿ ತೇಲಾಡುತಾ...
ನಿನಗಾಗಿ ನಾ ಬಂದೆ ನೋಡೆನ್ನುತಾ...
ನಲ್ಲ ನಿನ್ನ ಸಂದೇಶವಾ...
ನನಗೆ ಹೇಳಿದೆ....
ಆ ಮೋಡ ಬಾನಲ್ಲಿ ತೇಲಾಡುತಾ...
ನಿನಗಾಗಿ ನಾ ಬಂದೆ ನೋಡೆನ್ನುತಾ...
ನಲ್ಲೆ ನಿನ್ನ ಸಂದೇಶವಾ...
ನನಗೆ ಹೇಳಿದೆ....
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು
ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮ
ನನ್ನ ಎದೆಯಲಿ ಡವ ಡವ ಡವ ಡವ ಕೇಳಮ್ಮ
ನನ್ನ ಎದೆಯಲಿ ಡವ ಡವ ಡವ ಡವ
ಡವ ಡವ ಡವ ಡವ ಕೇಳಮ್ಮ.
ತಮ್ ನಮ್ ತಮ್ ನಮ್
ತಮ್ ನಮ್ ಮನಸು ಮಿಡಿಯುತಿದೆ
ಹೋ ಸೋತಿದೆ.....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ
ತಮ್ ನಮ್ ತಮ್ ನಮ್ ಎಂದಿದೆ.
ಘಲ್ ಘಲ್ ಘಲ್ ಘಲ್ ತಾಳಕೆ
ತಮ್ ನಮ್ ತಮ್ ನಮ್ ಎಂದಿದೆ.
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ
ಒಲವೇ ಜೀವನ ಸಾಕ್ಷಾತ್ಕಾರ
ಸಾಕ್ಷಾತ್ಕಾರ ಸಾಕ್ಷಾತ್ಕಾರ
ಜೀವ ಹೂವಾಗಿದೆ
ಭಾವ ಜೇನಾಗಿದೆ
ಬಾಳು ಹಾಡಾಗಿದೆ
ನಿನ್ನ ಸೇರಿ ನಾನು
ಜೀವ ಹೂವಾಗಿದೆ
ಭಾವ ಜೇನಾಗಿದೆ
ಬಾಳು ಹಾಡಾಗಿದೆ
ನಿನ್ನ ಸೇರಿ ನಾನು
ಜೀವ ಹೂವಾಗಿದೆ..ಏ ಏ ಏ ಏ.....ಏ
ಐ ಲವ್ ಯು
ಐ ಲವ್ ಯು
ರಾಜ ಮುದ್ಧು ರಾಜ
ನೂಕುವಂಥ ಕೋಪ ನನ್ನಲಲ್ಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ, ಕೋಪವೇಕೆ
ನಿನಗಾಗಿ ಬಂದೆ, ಒಲವನ್ನು ತಂದೆ
ನನದೇಲ್ಲ ನಿಂದೇ
ರಾಜ ಮುದ್ಧು ರಾಜ
ನೂಕುವಂಥ ಕೋಪ ನನ್ನಲಲ್ಲೇಕೆ ಮುದ್ಧು ರಾಜ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ...
ಇನ್ನೆಂದು ನಿನ್ನನು ಅಗಲಿ
ನಾನಿರಲಾರೆ...
ಒಂದು ಕ್ಷಣ ನೊಂದರು ನೀ
ನಾ ತಾಳಲಾ....ರೆ
ಒಂದು ಕ್ಷಣ ವಿರಹವನು
ನಾ ಸಹಿಸಲಾ...ರೆ
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿ ಘಳಿಗೆ ರಸದೀವಳಿಗೆ
ನಿನ್ನಂತರಂಗ ಮಧುರಂಗ
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿ ಘಳಿಗೆ ರಸದೀವಳಿಗೆ
ನಿನ್ನಂತರಂಗ ಮಧುರಂಗ
ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ
ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ
ನಗುನಗುತಾ
ನೀ ಬರುವೆ ....
ನಗು ನಗುತ ನೀ ಬರುವೆ
ನಗುವಿನಲೆ ಮನ ಸೆಳೆವೆ
ಕುಣಿಸಲು ನೀನು, ಕುಣಿಯುವೆ ನಾನು
ಮರೆಯುವೆ ಜಗವನ್ನೇ ಏ ಏ ಏ....
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಕಲಕಲನೆ ಕಲರವ ಕೇ.ಳಿ.
ಹೊಸಬಯಕೆ ಹೂ.ವು ಅರಳಿ..
ಜೊತೆಯಲ್ಲಿ ಪ್ರೆ.ಮಗೀ.ತೆ ಹಾ.ಡುವಾ.ಸೆ ಈಗ..
ಸ್ವಾಭಿಮಾನದ ನಲ್ಲೆ
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ ಒಳಗೆ ವೇದನೆ
ಈಳಿದು ಬಾ ಬಾಲೆ
ಸ್ವಾಭಿಮಾನದ ನಲ್ಲೆ
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ ಒಳಗೆ ವೇದನೆ
ಈಳಿದು ಬಾ ಬಾಲೆ
ನಗುತ ನಗುತ ಬಾಳೂ... ನೀನು
ನೂರು ವರುಷಾ
ಎಂದು ಹೀಗೆ ಇರಲೀ... ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು....ಉ ಉ
ದೇವರ ರೂಪ ನೀನೆ ಮಗು...ಉ ಉಉ