menu-iconlogo
logo

Savi Savi Nenapu

logo
Lirik
ಸವಿ ಸವಿ ನೆನಪು ಸಾವಿರ ನೆನಪು

ಸಾವಿರ ಕಾಲಕು ಸವೆಯದ ನೆನಪು

ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು

ಏನೊ ಒಂದು ತೊರೆದ ಹಾಗೆ .

ಯಾವುದೊ ಒಂದು ಪಡೆದ ಹಾಗೆ .

ಅಮ್ಮನು ಮಡಿಲ ಅಪ್ಪಿದಹಾಗೆ .

ಕಣ್ಣಂಚಲ್ಲೀ ... ಕಣ್ಣೀರ ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಮೊದಮೊದಲ್ ಹಿಡಿದ ಬಣ್ಣಡ ಚಿಟ್ಟೆ

ಮೊದಮೊದಲ್ ಕದ್ದ ಜಾತ್ರೆಯ ವಾಚು

ಮೊದಮೊದಲ್ ಸೇದಿದ ಗಣೇಶ ಬೀಡಿ...

ಮೊದಮೊದಲ್ ಕೂಡಿಟ್ಟ ಹುಂಡಿಯ ಕಾಸು

ಮೊದಮೊದಲ್ ಕಂಡ ಟೂರಿನ್ ಸಿನಿಮಾ

ಮೊದಮೊದಲ್ ಗೆದ್ದ ಕಬಡ್ಡಿ ಆಟ...

ಮೊದಮೊದಲ್ ಇದ್ದ ಹಳ್ಳಿಯ ಗರಿಮನೆ

ಮೊದಮೊದಲ್ ತಿಂದ ಕೈ ತುತ್ತೂಟ

ಮೊದಮೊದಲ್ ಆಡಿದ ಚುಕುಬುಕು ಪಯಣ

ಮೊದಮೊದಲ್ ಅಲಿಸಿದ ಗೆಳೆಯನ ಮರಣ

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಮೊದಮೊದಲ್ ಕಲಿತ ಅರೆ ಬರೆ ಈಜು,

ಮೊದಮೊದಲ್ ಕೊಂಡ ಹೀರೊ ಸೈಕಲ್

ಮೊದಮೊದಲ್ ಕಲಿಸಿದ ಕಮಲಾ ಟೀಚರ್...

ಮೊದಮೊದಲ್ ತಿಂದ ಅಪ್ಪನ ಏಟು,

ಮೊದಮೊದಲ್ ಆದ ಮೊಣಕೈ ಗಾಯ

ಮೊದಮೊದಲ್ ತೆಗೆಸಿದ ಕಲರ್ ಕಲರ್ ಪೋಟೊ...

ಮೊದಮೊದಲಾಗಿ. ಚಿಗುರಿದ ಮೀಸೆ.

ಮೊದಮೊದಲಾಗಿ. ಮೆಚ್ಚಿದ ಹೃದಯ

ಮೊದಮೊದಲ್ ಬರೆದ ಪ್ರೇಮದ ಪತ್ರ

ಮೊದಮೊದಲಾಗಿ. ಪಡೆದ ಮುತ್ತು. ಮುತ್ತು. ಮುತ್ತು...

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

Savi Savi Nenapu oleh Hariharan - Lirik dan Liputan