menu-iconlogo
huatong
huatong
avatar

Yalakki Kayi Sulidu

Manjula Gururaj/Gujjarhuatong
petite_blueeyed_blonhuatong
Lirik
Rakaman
ಯಾಲಕ್ಕಿ ಕಾಯ ಸುಲಿದು ಮಲ್ಲಿಗೆ ಹೂವ ಮುಡಿದು

ಯಾವಡಿಗೆ ಮಾ.ಡಿ ಫಲವೇನು..

ಯಾವಡಿಗೆ ಮಾ.ಡಿ ಫಲವೇನು ಮಾವನ ಮಗನೆ

ಮಾತಾಡೋನೆಂದರೇ..ಮನೆದೂರಾ..

ಮಾತಾಡೋನೆಂದರೇ..ಮನೆದೂ.ರಾ..

ಯಾಲಕ್ಕಿ ಕಾಯ ಸುಲಿದು ಮಲ್ಲಿಗೆ ಹೂವ ಮುಡಿದು

ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ.

ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ ಮಾವನ ಮಗಳೆ

ಮಾತಾಡೋನೆಂದರೇ..ಮನೆದೂರಾ..

ಮಾತಾಡೋನೆಂದರೇ..ಮನೆದೂ.ರಾ..

ಕಾಡಿಗೆ ಕಣ್ಣಿನೋಳೆ ಕೂಡು ಹುಬ್ಬೀನೋಳೆ

ಕಾಡಿಗೆ ಕಣ್ಣಿನೋಳೆ ಕೂಡು ಹುಬ್ಬೀನೋಳೆ

ಕೂಡೀಲಿ ನೀರಾ ಮೊಗೆಯೋಳೆ.

ಕೂಡೀಲಿ ನೀರಾ ಮೊಗೆಯೋಳೆ ಮಾವನ ಮಗಳೆ

ಮಾತಾಡೋನೆಂದರೇ..ಮನೆದೂರಾ..

ಮಾತಾಡೋನೆಂದರೇ..ಮನೆದೂ.ರಾ..

ಸಾಹಿತ್ಯ: ಜಿ ಎನ್ ಸ್ವಾಮಿ

ಸಂಗೀತ: ಎಂ ಎಸ್ ಮಾರುತಿ

ಗಾಯನ: ಗುಜ್ಜಾರ್ ಗೌಡ ಮತ್ತು ಮಂಜುಳಾ ಗುರುರಾಜ್

ನೀನೇನೆ ನನ್ನ ಪ್ರಾಣ ನೀನೇನೆ ನನ್ನ ತ್ರಾಣ

ನೀನೇನೆ ನನ್ನ ಪ್ರಾಣ ನೀನೇನೆ ನನ್ನ ತ್ರಾಣ

ನೀನಿಲ್ಲದೆ ನಾನು ಇರಲಾ.ರೇ..

ನೀನಿಲ್ಲದೆ ನಾನು ಇರಲಾ.ರೇ ಮಾವನ ಮಗನೆ

ಮೆಚ್ಚಿದೆ ನಿ.ನ್ನ ಮನಸಾರೇ..

ಮೆಚ್ಚಿದೆ ನಿ.ನ್ನ ಮನಸಾ.ರೇ..

ನಿಂಬೇಯ ಹಣ್ಣಿನಂಗೆ ಮೈಯ್ಯೆಲ್ಲ ಕೆಂಬಾಲೆ

ನಿಂಬೇಯ ಹಣ್ಣಿನಂಗೆ ಮೈಯ್ಯೆಲ್ಲ ಕೆಂಬಾಲೆ

ಹಂಬಾಲ ಬಿತ್ತಲ್ಲೆ ನಿನ್ನ ಮ್ಯಾಲೇ..

ಹಂಬಾಲ ಬಿತ್ತಲ್ಲೆ ನಿನ್ನ ಮ್ಯಾಲೇ ಮಾವನ ಮಗಳೆ

ಸಂಬಳ ಬಿಟ್ಟು ಬರಲೇನೇ..ಏಏ

ಸಂಬಳ ಬಿಟ್ಟು ಬರಲೇನೇ..

ಸಂಬಳ ಬಿಡಬ್ಯಾಡ ನನಗಾಗಿ ಕೆಡಬ್ಯಾಡ

ಸಂಬಳ ಬಿಡಬ್ಯಾಡ ನನಗಾಗಿ ಕೆಡಬ್ಯಾಡ

ತಿಂಗಳು ತಿಂಗಳಿಗೂ ಬಂದುಹೋಗು..

ತಿಂಗತಿಂಗಳಿಗೂ ಬಂದುಹೋಗು ಮಾವನ ಮಗನೆ

ತಿಂಗಳು ಪೂರಾ ಕಾದಿರುವೇ..ಏಏ

ತಿಂಗಳು ಪೂರಾ ಕಾ.ದಿರುವೇ..

ಕೆಟ್ಟರೆ ಕೆಡಲೇಳು ಗಟ್ಟೈತೆ ರೆಟ್ಟೇಯು

ಕೆಟ್ಟರೆ ಕೆಡಲೇಳು ಗಟ್ಟೈತೆ ರೆಟ್ಟೇಯು

ಕೂಲಿ ನಾಲೀನಾರು ಮಾಡೇನು..

ಕೂಲಿ ನಾಲೀನಾರು ಮಾಡೇನು ಮಾವನ ಮಗಳೆ

ರಾಣೀಯಂತೆ ನಿನ್ನ ಸಾಕೇನು..

ರಾಣೀಯಂತೆ ನಿನ್ನ ಸಾಕೇ.ನು..

ಯಾಲಕ್ಕಿ ಕಾಯ ಸುಲಿದು ಮಲ್ಲಿಗೆ ಹೂವ ಮುಡಿದು

ಯಾವಡಿಗಿ ಮಾ.ಡಿ ಫಲವೇನು..

ಯಾವಡಿಗಿ ಮಾ.ಡಿ ಫಲವೇನು ಮಾವನ ಮಗನೆ

ಮಾತಾಡೋನೆಂದರೇ..ಮನೆದೂರಾ..

ಮಾತಾಡೋನೆಂದರೇ..ಮನೆದೂ.ರಾ..

ಯಾಲಕ್ಕಿ ಕಾಯ ಸುಲಿದು ಮಲ್ಲಿಗೆ ಹೂವ ಮುಡಿದು

ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ..

ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ ಮಾವನ ಮಗಳೆ

ಮಾತಾಡೋನೆಂದರೇ..ಮನೆದೂರಾ..

ಮಾತಾಡೋನೆಂದರೇ..ಮನೆದೂ.ರಾ..

ಮಾತಾಡೋನೆಂದರೇ..ಮನೆದೂ..ರಾ..

Lebih Daripada Manjula Gururaj/Gujjar

Lihat semualogo