
Ee Mounava Thaalenu
ಈ ಮೌನವ
ತಾ...ಳೆನು
ಈ ಮೌನವ ತಾಳೆನು
ಮಾತಾಡೆ ದಾರಿಯ ಕಾಣೆನು
ಓ ರಾಜಾ..ಆ ಆ ಆ
ಈ ಮೌನವ ತಾಳೆನು
ನೀ ಹೇಳದೆ ಬಲ್ಲೆನು
ನಿನ್ನಾಸೆ ಕಣ್ಣಲ್ಲೆ ಕಂಡೆನು
ಓ ರಾಣಿ..ಈ ಈ ಈ..
ನೀ ಹೇಳದೆ ಬಲ್ಲೆನು
ನಾನಂದು ನಿನ್ನ
ಕಂಡಾಗ ಚಿನ್ನ
ಏನೇನೊ ಹೊಸ ಭಾವನೆ
ಹೂವಾಗಿ ಮನಸು
ಏನೇನೊ ಕನಸು
ನಾ ಕಾಣದ ಕಲ್ಪನೆ
ನಾನಂದು ನಿನ್ನ
ಕಂಡಾಗ ಚಿನ್ನ
ಏನೇನೊ ಹೊಸ ಭಾವನೆ
ಹೂವಾಗಿ ಮನಸು
ಏನೇನೊ ಕನಸು
ನಾ ಕಾಣದ ಕಲ್ಪನೆ
ಇನ್ನು ನಿನ್ನ ಬಿಡೆನು
ಈ ದೂ..ರ ಸಹಿಸೆನು
ನೀ ಹೇಳದೆ ಬಲ್ಲೆನು
ನಿನ್ನಾಸೆ ಕಣ್ಣಲ್ಲೆ ಕಂಡೆನು
ಓ ರಾಣಿ..ಈ ಈ ಈ
ನೀ ಹೇಳದೆ ಬಲ್ಲೆನು
ಚಿತ್ರ :ಮಯೂರ
ಗಾಯಕರು:ಡಾ.ರಾಜ್ ಕುಮಾರ್
ಮತ್ತು ಎಸ್.ಜಾನಕಿ ಅಮ್ಮ
ಸಂಗೀತ : ಜಿ.ಕೆ.ವೆಂಕಟೇಶ್
ಸಾಹಿತ್ಯ : ಚಿ.ಉದಯ ಶಂಕರ್
ಈ ಅಂದ ಕಂಡು
ನಾ ಮೋಹಗೊಂಡು
ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು
ಕಂಡಾಗ ನವಿಲು
ಕುಣಿವಂತೆ ನನಗಾಯಿತು
ಈ ಅಂದ ಕಂಡು
ನಾ ಮೋಹಗೊಂಡು
ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು
ಕಂಡಾಗ ನವಿಲು
ಕುಣಿವಂತೆ ನನಗಾಯಿತು
ಅಂದೆ ನಿನಗೆ ಸೋತೆ
ನಾ ಜಗವನೆ ಮರೆತೆ...
ಈ ಮೌನವ ತಾಳೆನು
ಮಾತಾಡೆ ದಾರಿಯ ಕಾಣೆನು
ಓ ರಾಜಾ..ಆ ಆ ಆ
ನೀ ಹೇಳದೆ ಬಲ್ಲೆನು
ನಿನ್ನಾಸೆ ಕಣ್ಣಲ್ಲೆ ಕಂಡೆನು
ಓ ರಾಣಿ.....
ಓ ರಾಜಾ.....
ಓ ರಾಣಿ.....
ಓ ರಾಜಾ.....
Ee Mounava Thaalenu oleh Rajkumar/S. Janaki - Lirik dan Liputan