menu-iconlogo
logo

Edu Rama Mandira

logo
Lirik
ಹೂಂ.. ಹೂಂ... ಹೂಂ... ಹೂಂ ಹೂಂ ಹೂಂಹೂಂ

ಇದು ರಾಮ ಮಂದಿರ

ಹೂಂ... ಆಮೇಲೆ

ನೀ...... ರಾಮಚಂದಿರ

ಓ..(ನಗು) ಹ್ಹ ಹ್ಹ ಹ್ಹ ...ಹೂಂ

ಇದು ರಾಮ ಮಂದಿರ

ನೀ... ರಾಮಚಂದಿರ

ಜೊತೆಯಾಗಿ ನೀನಿರಲು

ಬಾಳು ಸಹಜ ಸುಂದರಾ...ಆಆಆ...ಓಓಓ

ಇದು ರಾಮ ಮಂದಿರ

ನೀ... ರಾಮಚಂದಿರ

ಸ್ವಾಮಿ ನಿನ್ನ ಕಂಗಳಲಿ

ಸ್ವಾಮಿ ನಿನ್ನ ಕಂಗಳಲಿ

ಚಂದ್ರೋದಯ ಕಾಣುವೇ

ಸ್ವಾಮಿ ನಿನ್ನ ನಗುವಲಿ

ಅರುಣೋದಯ ನೋಡುವೇ

ಸರಸದಲ್ಲಿ ಚತುರ ಚತುರ

ಸರಸದಲ್ಲಿ ಚತುರ ಚತುರ

ನಿನ್ನ ಸ್ನೇಹ ಅಮರ

ನಿನ್ನ ಬಾ..ಳ ಕಮಲದಲೀ

ನಾನು ನಲಿವ ಭ್ರಮರ

ಇದು ರಾಮ ಮಂದಿರ

ನೀ... ರಾಮಚಂದಿರ

ಚಿತ್ರ: ರವಿಚಂದ್ರ

ಗಾಯಕರು: ಸುಲೋಚನಾ ಮತ್ತು ಡಾ.ರಾಜಕುಮಾರ್

ಸಂಗೀತ : ಉಪೇಂದ್ರಕುಮಾರ್

ಸಾಹಿತ್ಯ: ಚಿ.ಉದಯಶಂಕರ್

ನನ್ನ ಸೀತೆ ಇರುವ ತಾಣ

ನನ್ನ ಸೀತೆ ಇರುವ ತಾಣ

ಕ್ಷೀರಸಾಗರದಂತೆ

ನನ್ನ ಸೀತೆ ಬೆರೆತಾ ಮನವು

ಹೊನ್ನ ಹೂವಿನಂತೆ

ನುಡಿವ ಮಾ..ತು ಮಧುರ ಮಧುರ

ನುಡಿವ ಮಾ..ತು ಮಧುರ ಮಧುರ

ನಿನ್ನ ಪ್ರೇಮ ಅಮರ

ನೀನು ಹೃದಯ ತುಂಬಿರಲು

ಬಾಳು ಪ್ರೇಮ ಮಂದಿರ

ಇದು ರಾಮ ಮಂದಿರ

ಆನಂದ ಸಾಗರ

ಇದು ರಾಮ ಮಂದಿರ

ಆನಂದ ಸಾಗರ

ಜೊತೆಯಾಗಿ ನೀನಿರಲು

ಬಾಳು ಸಹಜ ಸುಂದರಾ...ಆಆಆ...ಓಓಓ

ಇದು ರಾಮ ಮಂದಿರ ಹುಂಹುಂ..ಹುಂಹುಂ..ಹುಂ

ನೀ... ರಾಮಚಂದಿರ ಹುಹುಂ.ಹುಂಹುಂ.ಹುಂಹುಂಹುಂ

ಹುಂಹುಂ..ಹುಂಹುಂ..ಹುಂಹುಂಹುಂ

ಹುಂ...ಹುಂಹುಂ..ಹುಂಹುಂಹುಂ

Edu Rama Mandira oleh Rajkumar - Lirik dan Liputan