menu-iconlogo
logo

Akasha Neene (Male)

logo
Lirik
ಆಕಾಶ ನೀನೆ, ನೀಡೊಂದು ಗೂಡು

ಬಂತೀಗ ಪ್ರೀತಿ ಹಾರಿ

ತಂಗಾಳಿ ನೀನೆ, ನೀಡೊಂದು ಹಾಡು

ಕಂಡೀತು ಕಾಲುದಾರಿ

ಒಂದಾದ ಜೀವ ಹೂವಾಗುವಂತೆ ಎಂದೂ ಕಾಪಾಡಲಿ

ಪ್ರೀತಿಯ ಅಂಬಾರಿ

ಆಕಾಶ ನೀನೆ, ನೀಡೊಂದು ಗೂಡು

ಬಂತೀಗ ಪ್ರೀತಿ ಹಾರಿ

ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲ ಹೂಹಂದರ

ಭಾವವೊಂದೆ ಆಗಿರೆ ಬೇಕೆ ಬೇರೆ ಭಾಷಾಂತರ?

ಎದೆಯಿಂದ ಹೊರಹೋಗೊ ಉಸಿರೆಲ್ಲ ಕನಸಾಗಲಿ

ಈ ಪ್ರೀತಿ ಜೊತೆಯಲ್ಲೆ ಒಂದೊಂದು ನನಸಾಗಲಿ

ಕೊನೆಯಿಲ್ಲದ ಕುಶಲೋಪರಿ

ಪ್ರೀತೀಯ ಅಂಬಾರಿ

ಆಕಾಶ ನೀನೆ, ನೀಡೊಂದು ಗೂಡು

ಬಂತೀಗ ಪ್ರೀತಿ ಹಾರಿ

ತಂಗಾಳಿ ನೀನೆ, ನೀಡೊಂದು ಹಾಡು

ಕಂಡೀತು ಕಾಲುದಾರಿ

ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ

ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ

ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ

ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ

ಮುಂದರಿಯುವ ಕಾದಂಬರಿ

ಪ್ರೀತೀಯ ಅಂಬಾರಿ

ಆಕಾಶ ನೀನೆ, ನೀಡೊಂದು ಗೂಡು

ಬಂತೀಗ ಪ್ರೀತಿ ಹಾರಿ

ತಂಗಾಳಿ ನೀನೆ, ನೀಡೊಂದು ಹಾಡು

ಕಂಡೀತು ಕಾಲುದಾರಿ

ಒಂದಾದ ಜೀವ ಹೂವಾಗುವಂತೆ ಎಂದೂ ಕಾಪಾಡಲಿ

ಪ್ರೀತಿಯ ಅಂಬಾರಿ

Akasha Neene (Male) oleh Sonu Nigam/V. Harikrishna - Lirik dan Liputan