menu-iconlogo
huatong
huatong
Letra
Gravações
(M) ಇಳಕಲ್ ಸೀರೆ ಉಟ್ಕೊಂಡು..

ಮೊಣಕಾಲ್ ಗಂಟ ಎತ್ಕೊಂಡು..

ಏರಿ ಮೇಲೆ ಎರಿ ಬಂದ್ಲು ನಾರಿ...

ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...

Music

(M) ಇಳಕಲ್ ಸೀರೆ ಉಟ್ಕೊಂಡು

ಮೊಣಕಾಲ್ ಗಂಟ ಎತ್ಕೊಂಡು

ಏರಿ ಮೇಲೆ ಎರಿ ಬಂದ್ಲು ನಾರಿ...

ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...

ಮಲ್ಲಿಗೆ ಈ ಮಲ್ಲಿಗೆ

ಆಹಾ ಮೈಸೂರ್ ಮಲ್ಲಿಗೆ

ಕೋರಸ್

(M) ಇಳಕಲ್ ಸೀರೆ ಉಟ್ಕೊಂಡು

ಮೊಣಕಾಲ್ ಗಂಟ ಎತ್ಕೊಂಡು

ಏರಿ ಮೇಲೆ ಎರಿ ಬಂದ್ಲು ನಾರಿ

ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ

ಮಲ್ಲಿಗೆ ಈ ಮಲ್ಲಿಗೆ

ಆಹಾ ಮೈಸೂರ್ ಮಲ್ಲಿಗೆ

ಕೋರಸ್

Music

ಕೋರಸ್

(M) ನಾಟಿ ಹೊಲದ ಕಳೆಯ ತೆಗೆದ್ಲು ಓ....

(F) ಬಾಳ ಬಂಗಾರ ನೀನು

(M) ಹೊಲಕೆ ತಾನೆ ಬೇಲಿ ಆದ್ಲು ಓ....

(F) ಹಣೆಯ ಸಿಂಗಾರ ನೀನು

(M) ಖಂಡ್ಗ ಖಂಡ್ಗ ಕನಸು ಬೆಳೆದ್ಲು ಓ....

(F) ನಿನ್ನ ಕೈಲಾಡೋ ಬೊಂಬೆ

(M) ಎದೆ ಕಣಜ ತುಂಬ್ಸೇ ಬಿಟ್ಲು ಓ....

(F) ನಾನಯ್ಯ ಬೊಂಬೆ ನಾನಯ್ಯ

(M) ಪುಂಗಿಯ ಬಳಿ ನಾಗ ಆದೆನು ನಾನೀಗ

ಏನು ಗುಂಗೊ ಗೌರಿ ಧನಿಯಲೀ....

ಮನ್ಸಿಗೆ ಸ್ನಾನ.... ಮಾಡ್ಸಿದ್ಲು...

ಪ್ರೀತಿಯ ಅಂಗಿ ತೊಡ್ಸಿದ್ಲು...

ಇಳಕಲ್ ಸೀರೆ ಉಟ್ಕೊಂಡು

ಮೊಣಕಾಲ್ ಗಂಟ ಎತ್ಕೊಂಡು

ಏರಿ ಮೇಲೆ ಎರಿ ಬಂದ್ಲು ನಾರಿ...

ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...

ಮಲ್ಲಿಗೆ ಈ ಮಲ್ಲಿಗೆ

ಆಹಾ ಮೈಸೂರ್ ಮಲ್ಲಿಗೆ

ಕೋರಸ್

Music

ಕೋರಸ್

(F) ಒಂದೇ ತಣಿಗೆಯಾಗೆ ಊಟ ಓ....

(M) ನೋಟದಾಗೆ ನಗೆಯಾ ಮೀಟಿ

(F) ಇಬ್ರ ಬಾಯಿಗೊಂದೇ ಲೋಟ ಓ....

(M) ಮೋಜಿನಾಗೆ ಎಲ್ಲೆಯ ದಾಟಿ

(F) ಬೇಗ ಬಿದ್ರೆ ಮದ್ವೆ ಬೆಸ್ಗೆ ಓ....

(M) ಮೋಡಿಯ ಮಾಡಿದೋಳ

(F) ಇಬ್ರ ಇಷ್ಟಕ್ಕೊಂದೇ ಹಾಸ್ಗೆ ಓ...

(M) ಪರಸಂಗ ಐತೇ..

(F) ಕನಸಲ್ಲೆ ಬಾಳ್ತಿವ್ನಿ ನನಸಿಗೆ ಕಾಯ್ತಿವ್ನಿ

ತಾಳಿಗಿಷ್ಟು ಚಿನ್ನ ತಾರಯ್ಯ...

ಉಕ್ತೀನ್ ನಿನ್ ಮನೆಗೆ ಹಾಲಾಗಿ..

ಇರ್ತೀನ್ ನಿನ್ ಕುಡಿಗೆ ತಾಯಾಗಿ..

(M) ಇಳಕಲ್ ಸೀರೆ ಉಟ್ಕೊಂಡು

ಮೊಣಕಾಲ್ ಗಂಟ ಎತ್ಕೊಂಡು

ಏರಿ ಮೇಲೆ ಎರಿ ಬಂದ್ಲು ನಾರಿ...

ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...

ಮಲ್ಲಿಗೆ ಈ ಮಲ್ಲಿಗೆ

ಆಹಾ ಮೈಸೂರ್ ಮಲ್ಲಿಗೆ

Mais de ಎಲ್ ಎನ್ ಶಾಸ್ತ್ರಿ/ಕುಸುಮ

Ver todaslogo

Você Pode Gostar