ಆಆಆ ಆಆಆ ಆಆಆ ಆಆಆ.........
Music by C.Ashvath
Lyrics by R.K.Lakshman Rao
ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
Follow me for more Bhaavageethe
ಒಲವೆಂಬ ಹಣತೆ ಎದೆಯಲ್ಲಿ
ಬೆಳಗಿ ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ
ಇಂದ್ಯಾವ ಬಂಧ ತೊಡರಿದೆ ನಿನ್ನ ಕಾಲಿಗೆ
ಇಂದ್ಯಾವ ಬಂಧ ತೊಡರಿದೆ ನಿನ್ನ ಕಾಲಿಗೆ
ಸುಡುಬೆಂಕಿ ಬೆಳಕು ಉಳಿಯಿತೆ
ನನ್ನ ಪಾಲಿಗೆ
ನನ್ನ ಪಾಲಿಗೆ
ಹೇಳಿ ಹೋಗು ಕಾರಣ ಹೋಗುವ ಮೊದಲು
Spread the beauty of Kannada
Language throughout the world
ಸವಿಭಾವಗಳಿಗೆ ನೀ ನಾದ ನೀಡಿ ಜೊತೆಗೂಡಿ ಹಾಡಿದೆ
ಇಂದ್ಯಾವ ಅಳಲು ಸೆರೆಯುಬ್ಬಿ ಕೊರಳು
ನೀ ಮೌನ ತಾಳಿದೆ
ನೀ ನೆಟ್ಟು ಬೆಳೆಸಿದ ಈ ಮರ ಫಲ ತೊಟ್ಟ ವೇಳೆಗೆ
ನೀ ನೆಟ್ಟು ಬೆಳೆಸಿದ ಈ ಮರ ಫಲ ತೊಟ್ಟ ವೇಳೆಗೆ
ಹೀಗೇಕೆ ಮುರಿದು ಉರುಳಿದೆ
ಯಾವ ದಾಳಿಗೆ
ಯಾವ ದಾಳಿಗೆ
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
Thank you