menu-iconlogo
huatong
huatong
avatar

Aa Devara Haadidu

Dr. Rajkumarhuatong
🎸Shantinath✨Boni🎸🎼🇮🇳huatong
Letra
Gravações
ಆ ದೇವರ ಹಾಡಿದು

ನಮ್ಮಂತೆ ಎಂದೂ ಇರದು

ನಗುವಿರಲಿ ಅಳುವಿರಲಿ

ಅವನಂತೆಯೇ ನಡೆವುದು

ಆ ದೇವರ ಹಾಡಿದು

ನಮ್ಮಂತೆ ಎಂದೂ ಇರದು

ನಗುವಿರಲಿ ಅಳುವಿರಲಿ

ಅವನಂತೆಯೇ ನಡೆವುದು

ನೋವಲ್ಲು ನೂರು ಸುಖವುಂಟು ಇಲ್ಲಿ

ಸುಖದಲ್ಲು ನೂರು ನೋವುಂಟು ಇಲ್ಲಿ

ಈ ಕಾಲದ ಕೈಯ್ಯಲ್ಲಿರೋ

ಗಡಿಯಾರವೇ ನಾನು ನೀನು

ನಡೆಸೋನದೆ ಕೊನೆಯ ಮಾತು

ಆ ದೇವರ ಹಾಡಿದು

ಅದು ಎಂದೋ ಬರೆದಾಗಿಹುದು

ಉಸಿರಿನಲೇ ಹೃದಯಗಳು

ಉಯ್ಯಾಲೆಯಾಗಿರುವುದು

ಕ್ಷಣಕೊಮ್ಮೆ ಸನಿಹ ಕ್ಷಣಕೊಮ್ಮೆ ವಿರಹ

ಹಣೆಮೇಲೆ ಕುಳಿತ ಆ ವಿಧಿಯ ಬರಹ

ಈ ಭೂಮಿಯೇ ಸುರವೀಣೆಯು

ಸ್ವರತಂತಿಯೇ ನಾನು ನೀನು

ನುಡಿಸೋನದೇ ಕೊನೆಯ ಹಾಡು

ಆ ದೇವರ ಹಾಡಿದು

ಅದು ಎಂದೂ ಬದಲಾಗದು

ಭರವಸೆಯೆ ಹೊಸ ಬೆಳಕು

ನಿಜ ಪ್ರೀತಿ ನಿಯಮ ಇದು

ಆ ದೇವರ ಹಾಡಿದು

ನಮ್ಮಂತೆ ಎಂದೂ ಇರದು

ನಗುವಿರಲಿ ಅಳುವಿರಲಿ

ಅವನಂತೆಯೇ ನಡೆವುದು

ಅವನಂತೆಯೇ ನಡೆವುದು

ಅವನಂತೆಯೇ ನಡೆವುದು

Mais de Dr. Rajkumar

Ver todaslogo