ಎಣ್ಣೆನೂ ಸೋಡನೂ ಎಂತ ಒಳ್ಳೆ ಫ್ರೆಂಡು,
ಒಂದನೊಂದು ಬಿಟ್ಟು ಎಂದು ಇರೋದಿಲ್ಲ.
ಹಂಗೆನೆ ನಾನೂನು, ನೀನು ಒಳ್ಳೆ ಫ್ರೆಂಡು,
ಅಣ್ಣ ತಮ್ಮ ಬಂದು ಬಳಗ ನಾವೆ ಎಲ್ಲ.
ಫುಲ್ಲು ಬಾಟಲು ಎತ್ತು ಸುಮ್ಮನೆ
ಕಂಠಪೂರ್ತಿ ನಿ ಕುಡಿಯೋ ಅಣ್ಣನೆ
ನೈಟು ಟೈಟು ಆದಮೇಲೆ ರೋಡೆ ನಮ್ಮನೆ, ಮನೆ, ಮನೆ.
ಉ ಉ ಉ ಎಣ್ಣೆ ಬೇಕು ಅಣ್ಣ,
ಉಉಉ ಇಷ್ಟೆ ಸಾಕು ರನ್ನ.
ಉಉಉ ಕುಡಿಯಬೇಕು ಇನ್ನ
ಉಉಉ ನೀ ನೋಡ್ಕೊ ನಿನ್ನ ಕಣ್ಣ.
ಬ್ಲಾಕ್ ಅಂಡ್ ವೈಟು ಕಣ್ಣು
ಫುಲ್ಲು ರೆಡ್ ಆಗಿದೆ,
ಅಣ್ಣ ನಿನ್ನ ಹೆಗಲೆ ಮಲಗೋ ಬೆಡ್ ಆಗಿದೆ.
ಬಡ್ಡಿಮಗಂದ್ ಬಾಡಿ ಯಾಕೋ ಸೇಕ್ ಆಯ್ತಿದೆ.
ಆದ್ರು ಒಂದು ಪೆಗ್ ಇರಲಿ ಬೇಕಾಯ್ತದೆ.
ಎಷ್ಟೆ ಟೈಟು ಆದರೂ ಸ್ಟಡಿ ನಾವು ಇಬ್ಬರು,
ಯಾರು ಏನೇ ಅಂದರೂ, ನಾವು ಎಣ್ಣೆ ದೋಸ್ತರು,
ಗುಂಡು ಹಾಕೋ ಗಂಡುಮಕ್ಳೇ ಒಳ್ಳೆ ನೇಚರುಉಉಉ,
ಉಉಉ ಎಣ್ಣೆ ಬೇಕು ಅಣ್ಣ
ಉಉಉ ಓಯ್ ಹನ್ನೆರಡಾಯ್ತು ಚಿನ್ನ.
ಉಉಉ ಬಾರು ತೆಗಿಸೋ ಅಣ್ಣ
ಉಉಉ ನೀ ನೆಟ್ಟುಗ್ ನಿಲ್ಲೋ ರನ್ನ.
ಬಾರಿನಲ್ಲಿ ಓಲ್ಡು ನೋಟು ವೇಸ್ಟಾಗಿದೆ,
ಕುಡಿಯೋರಿಗೆ ಪಾಪ ಕಷ್ಟ ಎಷ್ಟಾಗದೆ.
ಕುಡಿಯೋರೆಲ್ಲ ಸೇರಿ ಪಕ್ಷ ಕಟ್ಬೇಕಿದೆ,
ಪಾರ್ಲಿಮೆಂಟ್ಗೂ ನಮ್ಮ ಕೂಗು ಮುಟ್ಬೇಕಿದೆ.
ರೇಷನ್ ಕಾರ್ಡಿನಲ್ಲಿಯೂ ಸಿಕ್ಕಬೇಕು ಎಣ್ಣೆಯು,
ಮನೆಯ ನಲ್ಲಿಯಲ್ಲಿಯೂ ತೀರ್ಥ ಬರ್ಲಿ ಡೈಲಿಯೂ,
ನಮ್ಮ ಕಷ್ಟ ಅರ್ಥಮಾಡಿಕೊಳ್ಳಿ ಪಿಎಮ್ಮೂಉಉಉ.
ಉಉಉ ಎಣ್ಣೆ ಬೇಕು ಅಣ್ಣ,
ಉಉಉ ಖಾಲಿಯಾಯ್ತು ಚಿನ್ನ.
ಉಉಉ ನೀನೆ ಕುಡ್ಕೊಂಬಿಟ್ಯ ಅಣ್ಣ,
ಉಉಉ ಇನ್ನೇನ್ ಮಾಡ್ಲೋ ರನ್ನ?.