menu-iconlogo
huatong
huatong
avatar

Ene Aagali Nagabeku [Ajay]

Trisha Krishnanhuatong
..----ƦɨនϦɨ----..huatong
Letra
Gravações
----RISHI----

ಏನೆ ಆಗಲಿ ನಗಬೇಕು

ಯಾಕೆ ನೀನು ಹೀಗಿರಬೇಕು

ನೋವು ನಲಿವು ಸಮನಾಗಿರಬೇಕು.....

ಹರುಷವೊಂದೆ ಈ ಬಾಳಿನಲಿ

ಯಾರಿಗುಂಟು ಈ ಜಗದಲ್ಲಿ

ಏನೇ ಬಂದರೂ ಎದುರಿಸಬೇಕಿಲ್ಲಿ.....

ಏಳು ಬೀಳು

ಇಲ್ಲಿ ಯಾರಿಗಿಲ್ಲ ಹೇಳು...

ಎಲ್ಲಾ ಸಹಿಸಿ

ಮುಂದೆ ನಡೆಯೋದೆ..ಬಾಳು

ಅಳು ಏತಕೆ ಅಳು ಏತಕೆ

ಒಳ್ಳೆ ಕಾಲ ಬರುವುದು ಇಂದೆ

ಹೊಸ ಬಾಳಿಗೆ ಹೊಸತನವಿದೆ

ಹೊಸ ಬೆಳಕು ಉಂಟು ಕಣ್ಮುಂದೆ..

🎼 English lyrics 🎼

ಕಂಪು ಚೆಲ್ಲುವ ಹೂವುಗಳೆ..

ಇಂಪು ಚೆಲ್ಲುವ ಹಕ್ಕಿಗಳೆ..

ನಗುವ ಚೆಲ್ಲಿರಿ ಇವಳ ಮನದಲ್ಲಿ.....

ಮಳೆಯ ಸುರಿಸುವ ಮೋಡಗಳೆ..

ಗಾಳಿ ಹರಡುವ ಗಂಧಗಳೆ..

ಧೈರ್ಯ ತುಂಬಿರಿ ಇವಳ ಮನಸಲ್ಲಿ....

ಕೊರಗಿ ಸೊರಗಿ

ಮೊಗ್ಗಾಗದಿರು ಬಾಗಿ..

ನಾಳೆ ನಿನದೆ

ನೀ ಅರಳೆ ಹೂವಾಗಿ

ಪ್ರತಿ ಕಷ್ಟದ ಹಿಂದೆ ಸುಖವಿದೆ

ಸೋಲಲ್ಲು ಗೆಲುವಿದೆ ಮುಂದೆ

ಪ್ರತಿ ರಾತ್ರಿಯ ಹಿಂದೆ ಹಗಲಿದೆ

ನೋವಲ್ಲು ನಲಿವಿದೆ ಮುಂದೆ

🎼--Music--🎼

ಬಾಳು ಎಂಬುದೇ ಹೋರಾಟ..

ದಾರಿ ಕಾಣದ ಅಲೆದಾಟ..

ನಿತ್ಯವೂ ಇಲ್ಲಿದೆ ಸಾವಿರ ಹೊಡೆದಾಟ....

ಎಲ್ಲ ನಮ್ಮವರು ಲೋಕದಲಿ

ಯಾರು ಆಗರು ಸಮಯದಲಿ

ನಮ್ಮ ನಂಬಿಕೆ ನಮಗಿರಬೇಕಿಲ್ಲಿ.....

ಓಡೋ ಕಾಲ

ಎಂದೆಂದು ನಿಲ್ಲದಮ್ಮ..

ನಾವು ಅದರ

ಜೊತೆ ನಡೆಯಲೇಬೇಕಮ್ಮ

ಎಂದು ಆಗದು ಮುಂದೆ ಸಾಗದು

ಅನ್ನೋ ಮಾತನೆಲ್ಲ ಮರಿಬೇಕು

ಈ ಬದುಕಲಿ ಪ್ರತಿ ಹೆಜ್ಜೆಗೂ

ಒಂದು ಭರವಸೆ ಇರಬೇಕು.....

😍😁😁😁😍

Mais de Trisha Krishnan

Ver todaslogo