.。.: ಶ್ಯಾಮ್ .:。.
ಓ... ಚಿಲಿಪಿಲಿಗಳ ಪದ ನುಡಿಸುವ
ಗಿಳಿಗಳೇ ಕೇಳಿ
ಓ ಜಿಗಿಜಿಗಿದೊಡುವ
ಕುರಿಮರಿಗಳೇ ಜೊತೆಗೂಡಿ
.: ಶ್ಯಾಮ್ .:
ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯು ಅವಳೆನಮ್ಮ
ಬಂಗಾರದಂತ ಬೊಂಬೆಯೂ
ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯು ಅವಳೆನಮ್ಮ
ಬಂಗಾರದಂತ ಬೊಂಬೆಯೂ
ಗಿರಿಜಾರೋ ಗಂಗೆಯೇ
ಮಲೆನಾಡ ತುಂಗೆಯೇ
ಕಾವೇರಿ ತಂಗಿಯೇ
ವೈಯಾರಿ ಭದ್ರೆಯೇ
ಎಲ್ಲ ಸೇರಿ ಅವಳ ಪಾದ ತುಂಬಿರಿ
ಓ...ಓ ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯು ಅವಳೆನಮ್ಮ
ಬಂಗಾರದಂತ ಬೊಂಬೆಯು
▌ ಶ್ಯಾಮ್ ▌
ಕೋರಸ್
ಸೂಟು ಬೂಟು ವೀರನ
ಜೋಡಿ ನೀಡುವೆ
ಅಂಬಾರಿ ಮೇಲೆ ಅವಳ
ಮೆರವಣಿಗೆ ಮಾಡುವೆ
•. •.
ಓ.. ತೆಂಗು ಬಾಳೆ ಚಪ್ಪರ
ಊರ ಬೀದಿಗೆ
ಕಂಸಾಳೆ ಡೊಳ್ಳು ಚಮರ
ಓಲಗವ ತರಿಸುವೆ
ಅವಳ ಪಾದ ಭೂಮಿಗೆ
ಸೋಕದಂತೆ ಕಾಯುವೆ
ನಡೆವ ದಾರಿಗೆಲ್ಲವೂ
ಹೂವಾ ರಾಶಿ ಚೆಲುವೆ
ನಗೆ ಚೆಲ್ಲೋ ನನ್ನ ಬಂಗಾರಿಗೆ
ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯು ಅವಳೆನಮ್ಮ
ಬಂಗಾರದಂತ ಬೊಂಬೆಯೂ
• ಶ್ಯಾಮ್ •
ತಾರೆಗಳ ತಂದು ನಾ
ಕೂಡಿ ಹಾಕುವೆ
ಆ ಚಂದ್ರನನ್ನು ಇವಳ
ಅಂಗೈಗೆ ನೀಡುವೆ
•. •.
ಜೋಗುಳವ ಹಾಡುತ
ತುತ್ತ ನೀಡುವೆ
ನಾ ಕೂಸಿನಂತೆ ಆಗ
ಸಿಹಿ ಮುತ್ತಾ ಬೇಡುವೆ
ಕರುಳ ಗೆಳತಿಯಾದರು
ಇವಳೇ ನನಗೆ ತಾಯಿಯು
ಮಮತೆ ಬಳ್ಳಿ ಆದರೂ
ನನ್ನ ಉಸಿರ ದೇವಿಯು
ಬದುಕೆಲ್ಲ ನನ್ನ ಬಂಗಾರಿಗೆ
ನನ್ನಾಸೆ ಮಲ್ಲಿಗೆ ಬಂದಾಳಮ್ಮ
ನಮ್ಮೂರ ಜ್ಯೋತಿಯು ಇವಳೆನಮ್ಮ
ಬಂಗಾರದಂತ ಬೊಂಬೆಯೂ
ಗಿರಿಜಾರೋ ಗಂಗೆಯೇ
ಮಲೆನಾಡ ತುಂಗೆಯೇ
ಕಾವೇರಿ ತಂಗಿಯೇ
ವೈಯಾರಿ ಭದ್ರೆಯೇ
ಎಲ್ಲ ಸೇರಿ ಇವಳ ಪಾದ ತುಂಬಿರಿ
ಓ.. ಓ ನನ್ನಾಸೆ ಮಲ್ಲಿಗೆ ಬOದಾಳಮ್ಮ
ನಮ್ಮೂರ ಜ್ಯೋತಿಯು ಇವಳೆನಮ್ಮ
ಬಂಗಾರದಂತ ಬೊಂಬೆಯೂ......
•. •.