ಬುದ್ದಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು
ನೀವೂ ಎಲ್ಲೇ ಇರಲಿ
ನಾಳೆ ಹೇಗೆ ಇರಲಿ
ಜನ ಮೆಚ್ಚುವಂತೆ ನೀವಿರಬೇಕು ಆಆಆ ..
ಬುದ್ದಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು
ಹಿರಿಯರಲಿ ಗೌರವವು ನಿಮಗಿರಬೇಕು
ಗುರುಗಳಲಿ ಭಕ್ತಿ ಭಾವ ತುಂಬಿರಬೇಕು
ಯಾರಲ್ಲೂ ದ್ವೇಷ ಇರಬಾರದು
ಗೆಳೆಯರಲ್ಲಿ ಸ್ನೇಹ ಪ್ರೇಮ ತುಂಬಿರಬೇಕು
ಬಡವರನು ಪ್ರೀತಿಸುವ ಗುಣವಿರಬೇಕು
ಯಾರಲ್ಲೂ ನೋವು ತರಬಾರದು
ಸುಳ್ಳನುಡಿ ಆಡದಿರಿ
ಕೆಟ್ಟವರ ಸೇರದಿರಿ
ಬಾಳುವಾ ರೀತಿಯಾ ಕಲಿಯಿರಿ
ಬುದ್ದಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇಬೇಕು
ಲಾ ... ಲಾ ಲಲ.ಲ.
ಲಾ ... ಲಾ ಲಲ.ಲ.
ಲಾಲಾಲ ಲ..ಲ.ಲಾ
లలల
లలల
ಧೂಮಪಾನ ಮಾಡುವುದೇ
ಗೌರವವಲ್ಲ
ಮಧುಪಾನ ದೇಹಕ್ಕೆ ಒಳ್ಳೆಯದಲ್ಲ
ಈ ನಿಜವ ಏಕೆ ನೀ ಅರಿತಿಲ್ಲಾ
ಅತಿಯಾದ ಚೆಲ್ಲಾಟ ಸರಿಯೇನಲ್ಲ
ಹೆಣ್ಣುಗಳು ನಿನ್ನಾಟದ ಗೊಂಬೆಗಳಲ್ಲಾ
ಈ ಪಾಠ ಏಕೆ ನೀ ಕಲಿತಿಲ್ಲ
ಮಳ್ಳನಂತೆ ನೋಡದಿರು
ಕಳ್ಳನಂತೆ ಆಡದಿರು
ಬದುಕಿನಾ ನೀತಿಯಾ ಅರಿತುಕೊ
ಬುದ್ದಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ
ಹಿತವಿರಲೇಬೇಕು
ನೀವೂ ಎಲ್ಲೇ ಇರಲಿ
ನಾಳೆ ಹೇಗೆ ಇರಲಿ
ಜನ ಮೆಚ್ಚುವಂತೆ ನೀವಿರಬೇಕು
ಬುದ್ದಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ.ನನ್ನಾ ಹೊನ್ನ ಹೂಗಳೇ
ಮಾತಲ್ಲಿ ಮಿತವಿರಲೇ ಬೇಕು
ನಿಮ್ಮ ನಡೆಯಲ್ಲಿ
ಹಿತವಿರಲೇಬೇ ... ಕು