F: ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
M: ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ
ಒಲವಿನ ಕಾವ್ಯಕೆ ಇಂದೇ ಪೀಠಿಕೆ
F: ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
F: ಮುಡಿಯಜಾರಿದ ಹೂವಿದು
ಮುಗಿಯದ ಕಥೆ ನನ್ನದು
ಈ ಹೂವನು ಮಣ್ಣಿಂದಲೇ ಕಾಪಾಡಿದ ಕೈಗಳಿವು
M: ಗಂಗೆಗೆ ಕೊಳೆ ಸೊಂಕದು
ಪಾಪದ ಫಲ ಸಲ್ಲದು
ನಿನ್ನನು ಪಡೆದಂಥಹ ಈ ಭಾಗ್ಯವು ನನ್ನದು
F: ಪೂರ್ವದ ಪುಣ್ಯವೋ
M: ಜನ್ಮದ ಬಂಧವೋ
F: ನಾನು ನೀನು
M: ನೀನು ನಾನು
M: ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
M: ಬಾಳಿನ ಗುಡಿ ಬೆಳಗಲಿ
ಹರುಷದ ಹೊಳೆ ಹರಿಯಲಿ
ಪ್ರೇಮದ ಈ ನೌಕೆಯು ಸುಖ ತೀರವ ಸೇರಲಿ
M: HAE HE.....
F: AHAA HA
M: HEE HE...
F: AAH AAH
F: ಬಯಕೆಯ ಕುಡಿ ಚಿಗುರಲಿ
ಕನಸಿದು ಕೈಗೂಡಲಿ
ಎಂದಿಗೂ ಪತಿ ಸೇವೆಯ ಸೌಭಾಗ್ಯವು ಎನಗಿರಲಿ
M: ಸ್ವರವು ನೀ ಶೃತಿಯು ನಾ
F: ದೊರೆಯು ನೀ ದಾಸಿ ನಾ
M: ನಾನು ನೀನು
F: ನೀನು ನಾನು
M: ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
F: ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
M: ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ
ಒಲವಿನ ಕಾವ್ಯಕೆ ಇಂದೇ ಪೀಠಿಕೆ
BOTH: ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
aahaha aaha haaa
aahaa aahahaaaa