menu-iconlogo
huatong
huatong
s-p-balasubrahmanyams-janaki-cheluve-o--cheluve-cover-image

Cheluve-O- Cheluve

S. P. Balasubrahmanyam/S. Janakihuatong
NandanaBhathuatong
Тексты
Записи
ಚಿತ್ರ: ಇಬ್ಬನಿ ಕರಗಿತು; ಹಾಡು: ಚೆಲುವೆ ಓ ಚೆಲುವೆ

ಮೂಲ ಗಾಯಕರು: ಡಾ||ಎಸ.ಪಿ.ಬಾಲಸುಬ್ರಮಣ್ಯಂ ಹಾಗು ಎಸ.ಜಾನಕಿ

ಸಂಗೀತ: ರಾಜನ್ ನಾಗೇಂದ್ರ ಹಾಗು ಸಾಹಿತ್ಯ: ಚಿ ಉದಯಶಂಕರ್

ಸಮರ್ಪಣೆ: ಪಿ.ಆರ್.ನಂದನ್ ಭಟ್

[ಗಂಡು]> ಚೆಲುವೇ... ಓ ಚೆಲುವೇ

ನಿಜವಾ ನಾ ನುಡಿವೇ

ಒಲವು ಮೂಡಿದಾಗ

ಹೃದಯಾ ಹಾಡಿದಾಗ

ದಿನವೂ.... ಉಲ್ಲಾಸವೇನೇ

ಬದುಕು ಆನಂದ ತಾ ನೇ...

[ಹೆಣ್ಣು]> ಚೆಲುವಾ... ಓ ಚೆಲುವಾ

ನುಡಿವೇ ನಾ ನಿಜವಾ

ಒಲವು ಮೂಡಿದಾಗ

ಹೃದಯಾ ಹಾಡಿದಾಗ

ದಿನವೂ.... ಉಲ್ಲಾಸವೇನೇ

ಬದುಕು ಆನಂದ ತಾ ನೇ

[ಗಂಡು]> ಚೆಲುವೇ... ಓ ಚೆಲುವೇ

ನಿಜವಾ ನಾ ನುಡಿವೇ

ಮನವಾ... ಸೇರಿ ಹೋದೇ

ಸುಖದಾ... ಸಂಗೀತವಾದೆ

[ಗಂಡು]> ಬೆಳಗಿನ ಮಂಜಲ್ಲಿ ಬಂದಾಗ

ಹೆದರುತಾ ನಾ ಬೆಚ್ಚಿ ನಿಂತೇ

ಕಣ್ಣು ಕಾಣದೆ ಹೋದೇ

ನೀನು ಕಣ್ಣಾಗಿ ಬಂದೇ

[ಹೆಣ್ಣು]> ನುಡಿಯುವ ಮಾತೆಲ್ಲ ಮುತ್ತಂತೇ

ಗುಣದಲಿ ನೀ ಚಿನ್ನವಂತೇ

ನಿನ್ನಾ ಸೇರಿದ ಮೇಲೇ

ಇನ್ನು ನನಗಿಲ್ಲ ಚಿಂತೇ

[ಗಂಡು]> ನನ್ನಾಣೆ ಜೀವ ನೀನೇ ಜಾಣೆ

ಚೆಲುವೇ... ಓ ಚೆಲುವೇ

ನಿಜವಾ ನಾ ನುಡಿವೇ

ಒಲವು ಮೂಡಿದಾಗ

ಹೃದಯಾ ಹಾಡಿದಾಗ

[ಹೆಣ್ಣು]> ದಿನವೂ ಉಲ್ಲಾಸವೇನೇ

ಬದುಕು ಆನಂದ ತಾ ನೇ

ಚೆಲುವಾ... ಓ ಚೆಲುವಾ

[ಗಂಡು]> ಮ್ ಮ್

[ಹೆಣ್ಣು]> ನುಡಿವೇ ನಾ ನಿಜವಾ

[ಗಂಡು]> ಹೊ ಹೊ

[ಹೆಣ್ಣು]> ಮನವಾ... ಸೇರಿ ಹೋದೇ

ಸುಖದಾ... ಸಂಗೀತವಾದೆ

[ಹೆಣ್ಣು]> ಬಯಸದೆ ಓ ನಲ್ಲ ನೀನಾಗಿ

ಸಡಗರ ಬಾಳಲ್ಲಿ ತಂದೇ

ನಿನ್ನಾ ಮಾತಿಗೇ ಸೋತೇ

ನಾನೇ ಸೆರೆಯಾಗಿ ಹೋದೇ

[ಗಂಡು]> ಬದುಕಲ್ಲಿ ಸೋಲೆಂಬ ಮಾತಿಲ್ಲ

ನನ್ನನು ನೀ ಸೇರಿದಾಗ

ಗೆಲುವೇ ಕಾಣುವೇ ಎಂದೂ

ನಂಬು ನೀ ನನ್ನ ಇಂದೂ

[ಹೆಣ್ಣು]> ನನ್ನಲ್ಲಿ ಪ್ರಾಣ... ನೀನೇ ಜಾಣ

ಚೆಲುವಾ... ಓ ಚೆಲುವಾ

ನುಡಿವೇ ನಾ ನಿಜವಾ

ಒಲವು ಮೂಡಿದಾಗ

ಹೃದಯಾ ಹಾಡಿದಾಗ

[ಗಂಡು]> ಊ.... ದಿನವೂ ಉಲ್ಲಾಸವೇನೇ

ಬದುಕು ಆನಂದ ತಾನೇ

ಚೆಲುವೇ... ಓ ಚೆಲುವೇ

[ಹೆಣ್ಣು]> ಹಾ

[ಗಂಡು]> ನಿಜವಾ ನಾ ನುಡಿವೇ

[ಇಬ್ಬರು]> ಮನವಾ... ಸೇರಿ ಹೋದೇ

ಸುಖದಾ... ಸಂಗೀತವಾದೆ

ಆಹಾ ಆಹಾ ಹಾಹಾ

ಲಲಲಾ ಲಲ್ಲಾಲ ಲಾಲಾ

Еще от S. P. Balasubrahmanyam/S. Janaki

Смотреть всеlogo