M : ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
F : ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ ಲೀನವಾಯ್ತು ಮೋಹನ ಮುರಳಿ
M : ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
:ಅತ್ಯುತ್ತಮ ಟ್ರಾಕ್ ಗಳಿಗೆ SEVITH KUMAR ಎಂದು ಸರ್ಚ್ ಮಾಡಿ:
M : ನಿನ್ನ ಗೆಜ್ಜೆ ಘಲಿರೇನುವಾಗ
ನನ್ನ ಹೃದಯ ನುಡಿಯಿತು ರಾಗ
ನಿನ್ನ ಕಣ್ಣು ಕರೆದಿರುವಾಗ
ನನ್ನ ಬಯಕೆ ಪಡೆಯಿತು ಯೋಗ
ಆ.......ಆ..... ಎಲ್ಲಿ ನಿನ್ನ ಇಂಪಿನ ಕೊಳಲೋ
ಅಲ್ಲೇ ನನ್ನ ನಾಟ್ಯದ ನವಿಲು
ಎಲ್ಲಿ ನಿನ್ನ ಗೀತದ ಸೆಳೆಯೋ
ಅಲ್ಲೇ ನನ್ನ ಪ್ರೀತಿಯ ಹೊನಲು
ಜೀವಭಾವ ಅರಿತು ಬೆರೆತು ರಾಸಲೀಲ ಬಂಧ
ಜೀವಭಾವ ಅರಿತು ಬೆರೆತು ರಾಸಲೀಲ ಬಂಧ
F : ಗಾನ ತಾಣ ಮಿಂದು ನಲಿದು ಆತ್ಮಾನುಬಂಧ
M : ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
F : ಯಾವ ಜನುಮ ಜನುಮದ ನಂಟು
ನನ್ನ ನಿನ್ನ ಮೈತ್ರಿಯ ತಂತು
ನಮ್ಮ ನಲ್ಮೆ ಭಾಗ್ಯದ ಬೆಳಕು
ಪ್ರೀತಿಯಾಗಿ ಹರಿಯುತ ಬಂತು
ಆ.... ಆ.... ನಿನ್ನ ರೂಪು ಸೆಳೆದಿರುವಾಗ
ನೂರು ರೀತಿ ರಂಗಿನ ಭೋಗ
ನಿನ್ನ ಸನಿಹ ಹಿತವಿರುವಾಗ
ನನ್ನ ಆಸೆ ಬಯಸಿತು ಸಂಘ
F : ಮಾತು ಮೌನ ಮೀರಿ ಬೆಳೆದ ಪ್ರೇಮದಾಟ ಚೆಂದ
ಮಾತು ಮೌನ ಮೀರಿ ಬೆಳೆದ ಪ್ರೇಮದಾಟ ಚೆಂದ
M : ಮೋಹ ದಾಹ ಮೀಟಿ ಪಡೆದ ಸ್ವರ್ಗ ಸುಖವೇ ಚೆಂದ
M : ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
F : ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ ಲೀನವಾಯ್ತು ಮೋಹನ ಮುರಳಿ
M : ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ...
:ಧನ್ಯವಾದಗಳು: