menu-iconlogo
huatong
huatong
Тексты
Записи
ಜನುಮದ ಜೋಡಿ

ಮಣಿ ಮಣಿ ಮಣಿ ಮಣಿ

ಹುಂ ಹುಂ ಹುಂ ಹುಂ ಹುಂ ಹುಂ

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ

ದಾರದ್ ಜೊತೆ ಮಣಿ ಸೇರಿ ಚಂದದೊಂದು ಹಾರ

ತಾನಿ ತಂದಾನ ತಂದಾನ ತಂದಾನ ತಂದಾನ

ತಂದಾನ ತಂದಾನ ತಂದಾನನ

ತಾನಿ ತಂದಾನ ತಂದಾನ ತಂದಾನ ತಂದಾನ

ತಂದಾನ ತಂದಾನ ತಂದಾನನ

ನಿನ್ ಹೆಸರೇನೋ ಮಣಿ ಅಂತ ಗೊತ್ತಾಯ್ತು

ಆದ್ರೆ ಮಣಿ ಜೊತೆ ಇರೊ ದಾರದ

ಹೆಸರೇ ಗೊತ್ತಾಗ್ಲಿಲ್ವಲ್ಲೇ...ಏಏಏಏಏ

ಮಣಿ ಜೊತೆ ದಾರ ಇರಲ್ಲ

ದಾರದಲ್ಲಿ ಮಣಿ ಇರುತ್ತೆ ಅಂತ ಹೇಳೇ ಮಣಿ

ಗೊತ್ತಾಯ್ತು ಗೊತ್ತಾಯ್ತು

ಆದ್ರೆ ದಾರಕ್ಕೊಂದ್ ಹೆಸರಿರ್ಬೇಕಲ್ಲ

ವಸಿ ಉದಾರವಾಗಿ ಹೇಳಿದ್ರೆ ಆಗಲ್ವಾ

ಹೆಣ್ಣುಮಕ್ಕಳನ್ನ ಗಾಡೀಲ್ ಕೂರುಸ್ಕೊಂಡು

ಹಿಂಗೆಲ್ಲ ಆಡಬಾರ್ದು ಅಂತ ವಸಿ ಹೇಳೇ ಮಣಿ

ಏನೊ ಹೆಸ್ರು ಕೇಳಿದರೆ ಕೆಸ್ರಲ್ ಬಿದ್ದೋರ್

ಥರ ಆಡಬಾರದು ಅಂತ ಹೇಳೇ ಮಣಿ

ನನ್ ಹೆಸ್ರು ಮಾತ್ರ ಕೇಳಿ

ತಮ್ ಹೆಸ್ರು ಹೇಳ್ದೆ ಇರೋದ್

ಬಲ್ ಮೋಸ ಅಂತ ಹೇಳೇ ಮಣಿ

ಕೃಷ್ಣ.. ಕೃಷ್ಣ.. ಕೃಷ್ಣ.. ಕೃಷ್ಣ..

ಕೃಷ್ಣ.. ಕೃಷ್ಣ..ಕೃಷ್ಣ..ಕೃಷ್ಣ..

ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ...

ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ

ಹಂಗಾರೆ ಗೋಪಿಕಾ ಸ್ತ್ರೀಯರು

ಇದಾರಾ ಅಂತ ಈಗ್ಲೇ ಕೇಳ್ಬಿಡೆ ಮಣಿ

ಛೆ ಛೆ ಅದೆಲ್ಲಾ ದ್ವಾಪರ ಯುಗಕ್ಕೆ

ಈ ಕಲಿಯುಗದ ಕೃಷ್ಣ

ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ

ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲಾ..

ನನ್ನೂ ನೋಡಲ್ವಾ...?

ನೋಡ್ತಾನೇ ಇದಿನಲ್ಲಾ...

ಮಾತು ಮಾತಲ್ಲೇ ಮಾತು

ಮರಸ್ ಬ್ಯಾಡ ಅಂತ ಹೇಳೇ ಮಣಿ

ಇವಾಗಲಾದ್ರೂ ಹೆಸ್ರನ್ನ ಹೇಳಲಿ ಕನ್ಯಾಮಣಿ

ನನ್ ಹೆಸ್ರು ಒಂದು ಹೂವಿನ ಹೆಸರ್ನಾಗೆ

ಸೇರ್ಕೊಂಡೈತೆ ಅಂತ ಹೇಳೇ ಮಣಿ

ನನ್ ಹೆಸ್ರು ಒಂದು ಹೂವಿನ ಹೆಸರ್ನಾಗೆ

ಸೇರ್ಕೊಂಡೈತೆ ಅಂತ ಹೇಳೇ ಮಣಿ

ಅದು ಯಾವ ಹೂವು ಅದು ಯಾವ ಹೂವು

ನೆಲದ ಮ್ಯಾಲೈತೋ ಅಂಬರದಾಗೈತೋ...

ನೆಲದ ಮ್ಯಾಲೈತೋ ಅಂಬರದಾಗೈತೋ

ಗೊತ್ತಾಗಿಲ್ವಲ್ಲೆ ಮಣಿ ಕಣ್ಮಣಿ

ನೆಲದ ಮ್ಯಾಲೆ ಹುಟ್ಟಿ

ಅಂಬರದಾಗೆ ಚಾಚ್ಕೋoಡೈತೆ..

ನೆಲದ ಮ್ಯಾಲೆ ಹುಟ್ಟಿ

ಅಂಬರದಾಗೆ ಚಾಚ್ಕೋಒಡೈತೆ

ಅಂತ ಹೇಳೇ ಮಣಿ

ಬೇಗ ಹೇಳೇ ಮಣಿ...

ಅಂಬರಕ್ಕೆ ಚಾಚ್ಕೋoಡೈತೆ

ಅಂಬರ ಅಂದ್ರೆ ಕನಕಾಂಬರ

ಓ ಗೊತ್ತಾಯ್ತು

ಕನಕ..ಕನಕ..ಕನಕ..ಕನಕ..

ಕನಕ ಕನಕ ಎಷ್ಟು ಚೆಂದಾಗೈತೆ

ಕನಕ ಕನಕ ಆಹಾ ಮುದ್ದಾಗೈತೆ

ಹೌದು ಹೌದು ಚೆಂದಾಗೈತೆ

ಈಗ ಊರ್ ಹತ್ರಕ್ ಬಂದೈತೆ

ಗಾಡಿ ನಿಲ್ಸು ಅಂತ ಹೇಳೇ ಕನಕ

Еще от shivarajkumar/Manjula Gururaj

Смотреть всеlogo