ಓ ನನ್ನ ಕಣ್ಣೇ, ಓ ನನ್ನಕಣ್ಣೇ
ಕಣ್ಣೀರ ಒರೆಸಲಾ....
ನಿನಗಾಗಿ ನಾನು ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ...
ಕೂಸುಮರಿ ಮಾಡಿ ಹೊತ್ತಾಡಿಲಿಲ್ಲ
ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ
ತೂಗಿಲ್ಲ ತೊ....ಟ್ಟಿಲ
ನನ್ನೆಲ್ಲ ನೋವ ಕಂಡು ಕಾರ್ಮೋಡವು
ಕಣ್ಣೀರ ಸುರಿಸಿತಾ...
ಆರಾರಿರಾರೋ ರಾರೋ ರಾರೋ ಆರಾರಿರಾರೋ
ಆರಾರಿರಾರೋ ರಾರೋ ರಾರೋ ಆರಾರಿರಾರೋ
ಆರಾರಿರಾರೋ ರಾರೋ ರಾರೋ ಆರಾರಿರಾರೋ
ಆರಾರಿರಾರೋ ರಾರೋ ರಾರೋ ಆರಾರಿರಾರೋ
ಓ ನನ್ನ ಕಣ್ಣೇ, ಓ ನನ್ನಕಣ್ಣೇ
ಕಣ್ಣೀರ ಒರೆಸಲಾ....
ನಿನಗಾಗಿ ನಾನು ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ...
ಕರುಳಿನ ಸಂಭಂಧ ಕರಗದ ಅನುಬಂಧ
ಕರೆಯಿತು ಕೈಬೀಸಿ ಹುಡುಕಿ ಬಂದೆ
ಕಂಬನಿ ಕೊಳದೊಳಗೆ ಭಾವನೆ ಸುಳಿಯೊಳಗೆ
ಸಿಲುಕಿದ ಜೀವಕ್ಕೆ ನೀನೂ ಕಂಡೆ
ನಾನಿನ್ನ ಕಾವಲುಗಾರ ಹಾಯಾಗಿ ಮಲಗಮ್ಮ
ಕೈತಪ್ಪಿ ಹೋದರೆ ನೀನು ಅನ್ನೋದೆ ಭಯವಮ್ಮ
ಬಾಳೊಂದು ಪಂಜರಾ..ನೀನಲ್ಲಿ ಇಂಚರಾ..
ನೀನು ಬಾಯ್ತುಂಬ ಅಪ್ಪ ಅನ್ನಮ್ಮ ಸಾಕು
ಬದುಕು ಸಾರ್ಥಕಾ...
ಓ ನನ್ನ ಕಣ್ಣೇ, ಓ ನನ್ನಕಣ್ಣೇ
ಕಣ್ಣೀರ ಒರೆಸಲಾ....
ನಿನಗಾಗಿ ನಾನು ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ...
ಕೂಸುಮರಿ ಮಾಡಿ ಹೊತ್ತಾಡಿಲಿಲ್ಲ
ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ
ತೂಗಿಲ್ಲ ತೊ....ಟ್ಟಿಲ
ಲೋಕಾನೆ ಮಲಗಿರುವಾಗ ಮೌನದಲ್ಲೆ
ಇಬ್ಬರು ಮಾತಾಡುವ
ಆರಾರಿರಾರೋ ರಾರೋ ರಾರೋ ಆರಾರಿರಾರೋ
ಆರಾರಿರಾರೋ ರಾರೋ ರಾರೋ ಆರಾರಿರಾರೋ
ಆರಾರಿರಾರೋ ರಾರೋ ರಾರೋ ಆರಾರಿರಾರೋ
ಆರಾರಿರಾರೋ ರಾರೋ ರಾರೋ ಆರಾರಿರಾರೋ
ಓ ನನ್ನ ಕಣ್ಣೇ, ಓ ನನ್ನಕಣ್ಣೇ