M) ಏನೆಂದು ಹೆಸರಿಡಲಿ
ಈ ಚಂದ ಅನುಭವಕೆ
ಈಗಂತು ಹೃದಯದಲಿ
ನಿಂದೇನೆ ಚಟುವಟಿಕೆ
ಈ ಮೋಹದ ರೂವಾರಿ ನೀನಲ್ಲವೇ ?
ಇನ್ನೇತಕೆ ಬೇಜಾರು ನಾನಿಲ್ಲವೇ ?
ಏನೆಂದು ಹೆಸರಿಡಲಿ
ಈ ಚಂದ ಅನುಭವಕೆ
ಈಗಂತು ಹೃದಯದಲಿ..
ನಿಂದೇನೆ ಚಟುವಟಿಕೆ
M)ಜಾತ್ರೇಲೂ..ಸಂತೇಲೂ ನೀ ಕೈಯ ಬಿಡದಿರು
ಆಗಾಗ ಕಣ್ಣಲ್ಲಿ ಸಂದೇಶ..ಕೊಡುತಿರು
ಅದೇ ಪ್ರೀತಿ ಬೇರೆ ರೀತಿ ಹೇಗಂತ ಹೇಳೊದು
ಇಡೀ ರಾತ್ರಿ ಕಳೆದೂ ನಿನ್ನ ಬೆಳಕಿಗೆ ಕಾದು..
F) ಈ ಸ್ವಪ್ನದಾ ಸಂಚಾರ ಸಾಕಲ್ಲವೇ ?
ಇನ್ನೇತಕೆ ಬೇಜಾರು ನಾನಿಲ್ಲವೇ ?
ಏನೆಂದು ಹೆಸರಿಡಲಿ
ಈ ಚಂದ ಅನುಭವಕೆ
ಈಗಂತು ಹೃದಯದಲಿ..
ನಿಂದೇನೆ ಚಟುವಟಿಕೆ
M) ಓ...ಹೊತ್ತಿಲ್ಲಾ ಗೊತ್ತಿಲ್ಲಾ
ಬೆನ್ನಲ್ಲೇ ಬರುವೆ ನಾ
ನೀನಿಟ್ಟ..ಮುತ್ತುಂಟು ಇನ್ನೆಲ್ಲಿ ಬಡತನ
ಗಸ್ತು ಹೊಡೆವ ಚಂದ್ರ ಬಂದ ಕೇಳುತ್ತ ಮಾಮೂಲು
ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು..
F)ಓಓ..ನಿನ್ನಾಸೆಯೂ ನಂದೂನು ಹೌದಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ !
M) ಏನೆಂದು ಹೆಸರಿಡಲಿ
ಈ ಚಂದ ಅನುಭವಕೆ
ಈಗಂತು ಹೃದಯದಲಿ..
ನಿಂದೇನೆ ಚಟುವಟಿಕೆ
F) ಈ ಮೋಹದ ರೂವಾರಿ ನೀನಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ