menu-iconlogo
logo

Aseya Bhava

logo
Тексты
ಆಸೆಯ ಭಾವ ..

ಒಲವಿನ ಜೀವ

ಒಂದಾಗಿ ಬಂದಿದೆ ..

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ..

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ.

ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು

ಚಿಮ್ಮಿಸಿ ಹೊಮ್ಮುವಾ ಚೆಲುವಿಕೆ ಇಲ್ಲಿದೆ ..

ಪ್ರೇಮದ ಸೀಮೆಯಲಿ ಸೌರಭ ತುಂಬಿದಾ

ಬಾಡದ ಹೂವಿನ ಕಿರುನಗೆ ಚೆಲ್ಲಿದೆ

ಬಾಳಿನ ಭಾಗ್ಯ ನೌಕೆ ತೀರ ಸೆರೆ ತೇಲಿ ತೇಲಿದೆ

ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ

ಹೆಮ್ಮೆಯ ಹೆಚ್ಚಿಸುವ ಈ ನಡೆ ಗಂಭೀರ

ಹಮ್ಮಿನ ಹೃದಯವೇ ಪ್ರೀತಿಯ ಸಾಗರ

ಚೆನ್ನಿಗ ಚೆಂದಿರನ ಸ್ನೇಹದ ಕಾಣಿಕೆ

ಹೊಂದಿದ ಭಾಗ್ಯವು ನನ್ನದು ಇಂದಿಗೆ

ಪೂಜೆಯ ಪುಣ್ಯವೆನ ಕಣ್ಣ ಮುಂದೆ ಬಂದು ನಿಂತಿದೆ

ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ

ಸನಿಹದ ಸುಖದಲ್ಲಿ ಸ್ನೇಹದ ಕಂಪಿನಲಿ

ಸಂಯಮ ನಿಲ್ಲದೆ ಸಂಗಮ ಬೇಡಿದೆ

ಕೂಡಿದ ಹೃದಯಗಳ ಹಂಬಲ ಕೈಸೇರಿ

ಮೆರೆಯ ಇಲ್ಲದ ಮಧುರಕೆ ತುಂಬಿದೆ

ಮಾಂಗಲ್ಯ ಭಾಗ್ಯದಿಂದ ಎಂದು ನಮ್ಮ ಬಾಳು ಬೆಳಗಿದೆ

ಪ್ರೇಮದ ಜೋಡಿ ದೇವರ ಬೇಡಿ ಹಾಯಾಗಿ ಹಾಡಿದೆ

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ .. .