ಚಲನಚಿತ್ರ •• ಕಾಂತಾರ √√
ಅಪ್ಲೋಡ್ •• ಮಂಜುನಾಥ್ ಯಾದವ್ √√
M)ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ
ಮಂದಹಾಸ.. ಆಹಾ ನಲುಮೆಯಾ ಶ್ರಾವಣ ಮಾಸ
••• ಮಂಜುನಾಥ್ ಯಾದವ್ √√√
M)ಮಾತಾಡುವ ಮಂದಾರವೇ ಕಂಗೊಳಿಸಬೇಡಾ ಹೇಳದೇ
F)ನಾನೇತಕೆ ನಿನಗ್ಹೇಳಲಿ ನಿನ್ನ ಮೈಯ ತುಂಬಾ ಕಣ್ಣಿದೆ
M)ಮನದಾಳದ ರಸ ಮಂಜರಿ ರಂಗೇರಿ ನಿನ್ನ ಕಾದಿದೆ
F)ಪಿಸುಮಾತಿನ ಪಂದ್ಯಾವಳಿ ಆಕಾಶವಾಣಿ ಆಗಿದೆ
M)ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ ಮಾಡುಬಾ ಕೊಂಗಾಟವಾ
F)ಕಣ್ಣಿಗೆ ಕಾಣೋ ಹೂವುಗಳೆಲ್ಲ ಏನೋ ಕೇಳುತಿವೆ
ನಿನ್ನಯ ನೆರಳ ಮೇಲೆ ನೂರು ಚಾಡಿ ಹೇಳುತಿವೆ
M)ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ
••• ಮಂಜುನಾಥ್ ಯಾದವ್ √√√
M)ಶೃಂಗಾರದ ಸೋಬಾನೆಯ ಕಣ್ಣಾರೆ ನೀನು ಹಾಡಿದೆ
F)ಈ ಹಾಡಿಗೆ ಕುಣಿದಾಡುವ ಸಾಹಸವ ಯಾಕೆ ಮಾಡುವೆ ?
M)ಸೌಗಂಧದ ಸುಳಿಯಾಗಿ ನೀ ನನ್ನೆದೆಗೆ ಬೇಲಿ ಹಾಕಿದೆ
F)ನಾ ಕಾಣುವ ಕನಸಲ್ಲಿಯೇ ನೀನ್ಯಾಕೆ ಬೇಲಿ ಹಾರುವೆ
M)ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ ಮಾಡುಬಾ ಕೊಂಗಾಟವಾ
F)ಸುಂದರವಾದ ಸೋಜಿಗವೆಲ್ಲಾ ಕಣ್ಣಾ ಮುಂದೆ ಇದೆ
ಬಣ್ಣಿಸಬಂದ ರೂಪಕವೆಲ್ಲಾ ತಾನೇ ಸೋಲುತಿದೆ
M)ಏ ಮಂದಹಾಸ ಆಹಾ ನಲುಮೆಯಾ ಶ್ರಾವಣ ಮಾಸ..
ಧನ್ಯವಾದಗಳು....√√