ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,
ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,
ನೀ ನಗುತಲಿ ಸುಖವಾಗಿರೆ,
ಆನಂದದಾ ಹೊನಲಾಗಿರೆ,
ಬಾಳೇ ಸವಿಗಾನ ...
ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,
ಬಿಸಿಲಾಗಲಿ,ಮಳೆಯಾಗಲಿ,
ನೆರಳಾಗಿ ನಾನು ಬರುವೆನು ಜೊತೆಗೆ,
ಬಿಸಿಲಾಗಲಿ,ಮಳೆಯಾಗಲಿ,
ನೆರಳಾಗಿ ನಾನು ಬರುವೆನು ಜೊತೆಗೆ,
ಸವಿ ಮಾತಲಿ ಸುಖ ನೀಡುವೆ
ಎಂದೆಂದಿಗೂ ಹೀಗೆ,
ಹೂವಾಗಲಿ ಈ ಮೊಗವರಳಿ,
ಸಂತೋಷದ ಪರಿಮಳ ಚೆಲ್ಲಿ,
ಹೂವಾಗಲಿ ಈ ಮೊಗವರಳಿ,
ಸಂತೋಷದ ಪರಿಮಳ ಚೆಲ್ಲಿ,
ಹಾಯಾಗಿರು.
ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,
ಈ ತಾವರೆ ಮೂಗವೇತಕೆ,
ಮೂಗ್ಗಾದ ಹಾಗೆ ಸೊರಗಿದೆ ಚೆಲುವೆ,
ಈ ತಾವರೆ ಮೂಗವೇತಕೆ,
ಮೂಗ್ಗಾದ ಹಾಗೆ ಸೊರಗಿದೆ ಚೆಲುವೆ,
ಇಂದೇತಕೆ ಈ ಮೌನವು
ಹೀಗೇಕೆ ನೀನಿರುವೆ,
ನೀನೇತಕೆ ಬಾಡುವೆ ಕೊರಗಿ,
ನಾನಿಲ್ಲವೇ ಆಸರೆಯಾಗಿ,
ನೀನೇತಕೆ ಬಾಡುವೆ ಕೊರಗಿ,
ನಾನಿಲ್ಲವೇ ಆಸರೆಯಾಗಿ,
ಹಾಯಾಗಿರು
ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,
ನೀ ನಗುತಲಿ ಸುಖವಾಗಿರೆ,
ಆನಂದದಾ ಹೊನಲಾಗಿರೆ,
ಬಾಳೇ ಸವಿಗಾನ ...
ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,