ಗಂಡು: ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಹೆಣ್ಣು: ಪ್ರೀತಿ ಬಂತೂ ಅದಕ್ಕೀಗ
ಅದರಿಂದ ಹೊಸ ರಾಗ
ಕೇಳಿದೆ ಏನಂತೀಯಾ
ಗಂಡು: ಸುಖವಾಗಿದೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಗಂಡು: ಗಂಗೆಯೇ ಕೇಳು
ಗಾಳಿಯೇ ಕೇಳು
ಇವಳಿಗೆ ನನ್ನ ಮನಸಿಡುವೆ
ಹೆಣ್ಣು: ಹೃದಯವ ತೆರೆದು
ಮನಸನು ಪಡೆದು
ಜನುಮದ ಪ್ರೀತಿಯ ನಾನೆರೆವೆ
ಗಂಡು: ಪ್ರೀತಿಯ ಊರ ನಾಯಕಿಯೇ
ಮುತ್ತಿನ ತೇರ ದೇವತೆಯೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ
ಉಸಿರಿರೊವರೆಗೂ ನಾ ಪೂಜಿಸುವೆ
ಈ ಆಸೆಗೆ ಏನಂತೀಯಾ
ನನ್ನ ಭಾಷೆಗೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಹೆಣ್ಣು: ಸಾವಿರ ಜನುಮ
ಇದ್ದರು ನನಗೆ
ನಿನ್ನವಳಾಗಿ ಉಳಿದಿರುವೆ
ಗಂಡು: ಪ್ರೇಮದ ಕನಸ
ಕಾಣುವ ಕಣ್ಣಿಗೆ
ರೆಪ್ಪೆಗಳಾಗಿ ನಾನಿರುವೆ
ಹೆಣ್ಣು: ನಿನ್ನಂತರಂಗ ನಾನಲ್ಲವೇ
ನಿನ್ನಾಸೆ ಎಲ್ಲಾ ನನಗಲ್ಲವೇ
ಆ ಸಾಗರದಿ ನಾ ಮುಳುಗಿದರು
ಆ ಪ್ರಳಯದಲಿ ನಾ ಸಿಲುಕಿದರು
ನಿನ್ನ ಕೂಡುವೆ ಏನಂತೀಯಾ
ಜೊತೆ ಬಾಳುವೆ ಹೂಂ ಅಂತೀಯಾ
ಗಂಡು: ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಹೆಣ್ಣು: ಪ್ರೀತಿ ಬಂತೂ ಅದಕ್ಕೀಗ
ಅದರಿಂದ ಹೊಸ ರಾಗ
ಕೇಳಿದೆ ಏನಂತೀಯಾ
ಗಂಡು :ಸುಖವಾಗಿದೆ ಹೂಂ ಅಂತೀಯಾ