menu-iconlogo
huatong
huatong
avatar

Avanalli Evalilli

L. N. Shastryhuatong
เนื้อเพลง
บันทึก
ಅವನಲ್ಲಿ, ಇವಳಿಲ್ಲಿ,

ಮಾತಿಲ್ಲಾ, ಕಥೆಯಿಲ್ಲ.

ಎದುರೆದುರು ಬಂದಾಗ, ಹೆದರ್ಹೆದರಿ ನಿಂತಾಗಾ,

ಅಲ್ಲೇ ಆರಂಭ ಪ್ರೇಮ.

ಅವನಲ್ಲಿ, ಇವಳಿಲ್ಲಿ,

ಮಾತಿಲ್ಲಾ, ಕಥೆಯಿಲ್ಲ.

ಎದುರೆದುರು ಬಂದಾಗ, ಹೆದರ್ಹೆದರಿ ನಿಂತಾಗಾ,

ಅಲ್ಲೇ ಆರಂಭ ಪ್ರೇಮ.

ಅವನಲ್ಲಿ ಇವಳಿಲ್ಲಿ,

ಮಾತಿಲ್ಲಾ, ಕಥೆಯಿಲ್ಲ.

ನೋಡಿ ನೋಡಿ ಪ್ರೇಮವನು ಮಾಡೋದಲ್ಲ.

ಮಾಡುತಲಿ ಹಾಡೋದಲ್ಲಾ,

ಹಾಡಿನಲಿ ಹೇಳೋದಲ್ಲ.

ಹೇಳುವುದ ಕೇಳೋದಲ್ಲಾ,

ಕೇಳುತಲಿ ಕಲಿಯೋದಲ್ಲಾ,

ಕಲಿತು ನೀ ಮಾಡೋದಲ್ಲಾ,

ಮೌನವೇನೆ ಧ್ಯಾನವೇ ಪ್ರೇಮಾ …..

ಅವನಲ್ಲಿ ಇವಳಿಲ್ಲಿ,

ಮಾತಿಲ್ಲಾ, ಕಥೆಯಿಲ್ಲ.

ನೀನೆ ಎಲ್ಲಾ,

ನೀನಿರದೆ ಬಾಳೇ ಇಲ್ಲಾ,

ಅನ್ನುವುದು ಪ್ರೇಮಾ ಅಲ್ಲ.

ಮರಗಳನು ಸುತ್ತೋದಲ್ಲಾ.

ಕವನಗಳ ಗೀಚೋದಲ್ಲಾ,

ನೆತ್ತರಲಿ ಬರಿಯೋದಲ್ಲಾ,

ವಿಷವನು ಕುಡಿಯೋದಲ್ಲಾ,

ಮೌನವೇನೆ ಧ್ಯಾನವೇ ಪ್ರೇಮಾ …..

ಅವನಲ್ಲಿ, ಇವಳಿಲ್ಲಿ,

ಮಾತಿಲ್ಲಾ, ಕಥೆಯಿಲ್ಲ.

ಎದುರೆದುರು ಬಂದಾಗ,

ಹೆದರ್ಹೆದರಿ ನಿಂತಾಗಾ,

ಅಲ್ಲೇ ಆರಂಭ ಪ್ರೇಮ.

ಅವನಲ್ಲಿ ಇವಳಿಲ್ಲಿ,

ಮಾತಿಲ್ಲಾ, ಕಥೆಯಿಲ್ಲ.

เพิ่มเติมจาก L. N. Shastry

ดูทั้งหมดlogo