menu-iconlogo
huatong
huatong
p-b-sreenivas-kannadadha-kuladevi-cover-image

Kannadadha Kuladevi

P. B. Sreenivashuatong
rickels1huatong
เนื้อเพลง
บันทึก
ಕನ್ನಡದ ಕುಲದೇವಿ

ಕಾಪಾಡು ಬಾ ತಾಯೇ

ಮುನ್ನಡೆಯ ಕನ್ನಡದ

ದಾರಿ ದೀವಿಗೆ ನೀನೆ

ಕನ್ನಡದ ಕುಲದೇವಿ

ಕಾಪಾಡು ಬಾ ತಾಯೇ

ಪ್ರೇಮ ಕರುಣೆಯ ಕಲಿಸಿ

ಶಾಂತಿ ಸಹನೆಯ ಬೆಳೆಸಿ

ಕಾಮಕ್ರೋಧವನಳಿಸಿ

ಕಾಪಾಡು ತಾಯೇ

ಪ್ರೇಮ ಕರುಣೆಯ ಕಲಿಸಿ

ಶಾಂತಿ ಸಹನೆಯ ಬೆಳೆಸಿ

ಕಾಮಕ್ರೋಧವನಳಿಸಿ

ಕಾಪಾಡು ತಾಯೇ

ಒಂದಾದ ದೇಶದಲಿ

ಹೊಂದಿ ಬಾಳದ ಸುತರ

ಹೊಸಬೆಸಗೆಯಲಿ ಬಿಗಿದು

ಒಂದು ಗೂಡಿಸೆ ತಾಯೇ

ಕನ್ನಡದ ಕುಲದೇವಿ

ಕಾಪಾಡು ಬಾ ತಾಯೇ

ಯಾವೆಣ್ಣೆಯಾದರೂ

ಬೆಳಗುವುದೇ ಗುರಿಯೆಂಬ

ತತ್ತ್ವವನು ನೀನೆತ್ತಿ

ತೋರು ಬಾ ತಾಯೇ

ಯಾವೆಣ್ಣೆಯಾದರೂ

ಬೆಳಗುವುದೇ ಗುರಿಯೆಂಬ

ತತ್ತ್ವವನು ನೀನೆತ್ತಿ

ತೋರು ಬಾ ತಾಯೇ

ಎದೆಯಾಂತರಾಳದಲಿ

ಪುಟಿವ ಕಾರಂಜಿಯಲಿ

ಒಂದಾಗಿ ಕೂ.... ಗಲಿ

ಕನ್ನಡಾ ಕನ್ನಡಾ...

ಕನ್ನಡದ ಕುಲದೇವಿ

ಕಾಪಾಡು ಬಾ ತಾಯೇ

ಮುನ್ನಡೆಯ ಕನ್ನಡದ

ದಾರಿ ದೀವಿಗೆ ನೀನೆ

ಕನ್ನಡದ ಕುಲದೇವಿ

ಕಾಪಾಡು ಬಾ ತಾಯೇ

เพิ่มเติมจาก P. B. Sreenivas

ดูทั้งหมดlogo