ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಅವು ಎಂದಾದರೂ ಆಗಲಿ ಬೇರೆ ಇರುವುದೇ
ಅವು ಎಂದಾದರೂ ಒಂದನೊಂದು ಮರೆವುದೇ
ಹೂವು ಗಂಧ ಬೇರೆ ಬೇರೆ ಇರುವುದೇ
ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಹೇಗೋ ಏನೋ ಒಲವು ಮೂಡಿ ಬೆಳೆಯಿತು
ತನು ಮನಗಳು ಎಲ್ಲಾ ನಿನ್ನ ವಶವಾಯಿತು
ನನ್ನ ನಿನ
ನನ್ನ ನಿನ್ನ
ನನ್ನ ನಿನ್ನ ಪ್ರೇಮ ಬೆಸುಗೆ ಬಿಡುವುದೇ
ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಊರು ಕೇರಿ ಒಂದೂ ಪ್ರೇಮ ಕೇಳದು
ಊರು ಕೇರಿ ಒಂದೂ ಪ್ರೇಮ ಕೇಳದು
ಜಾತಿ ಗೀತಿ ಹೆಸರು ಕೂಡ ತಿಳಿಯದು
ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಮನ ಮನ ಮನ ಮನ
ಮನ ಮನ ಮಾತನೊಂದೇ ಅರಿವುದು
ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಅವು ಎಂದಾದರೂ ಆಗಲಿ ಬೇರೆ ಇರುವುದೇ
ಹೂವು ಗಂಧ ಬೇರೆ ಬೇರೆ ಇರುವುದೇ
ಅವು ಎಂದಾದರೂ ಒಂದನೊಂದು ಮರೆವುದೇ