menu-iconlogo
huatong
huatong
avatar

Yendu Kanda Kanasu

Rajesh Krishnanhuatong
🌺ಮಹಾಲಕ್ಷ್ಮಿ🌺huatong
เนื้อเพลง
บันทึก
ಎಂದೊ ಕಂಡ ಕನಸು

ಅದು ನಿನ್ನ ಮನಸು

ನಿನ್ನ ಮನಸಿಗಾಗಿ ಸೋತೇ...,

ನಿನ್ನ ಒಂದು ಸ್ಪರ್ಶ

ನಂಗೆ ನೂರು ವರುಷ

ನಿನ್ನ ನೆರಳಿಗಾಗಿ ಸೋತೇ...

ನೂರಾರು ಮುಳ್ಳುಗಳಾ ನಡುವೆ ಹೂವಿದೇ

ನೂರಾರು ನೋವುಗಳಾ ನಡುವೆ ಒಲವಿದೇ

ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ

ನೆನೆ ನೆನೆದು ಏಕಿರುವೆ ಮಾತನಾಡದೆ

ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ

ನೀ ತಾನೆ ನನ್ನ ಜೀವ

ಎಂದೊ ಕಂಡ ಕನಸು

ಅದು ನಿನ್ನ ಮನಸು

ನಿನ್ನ ಮನಸಿಗಾಗಿ ಸೋತೇ...

ಆ ಮೋಡದಿಂದ ಮಳೆಗೆ ಒಂದು ಸೂಕ್ತಿ ಇದೆ

ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ

ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ

ಆ ಕತೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ

ಇದು ಮರೆಯದ ಹಾಡು,ಮೌನಗಳೇ ಸಾಕ್ಷಿಗಳು

ಇದು ಮುಗಿಯದ ನೆನಪು,ವಿರಹಗಳೇ ಗುರುತುಗಳು

ಇದು ಮರೆಯದ ಹಾಡು,ಮೌನಗಳೇ ಸಾಕ್ಷಿಗಳು

ಇದು ಮುಗಿಯದ ನೆನಪು,ವಿರಹಗಳೇ ಗುರುತುಗಳು

ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ

ನೀ ತಾನೆ ನನ್ನ ಜೀವ

ಎಂದೊ ಕಂಡ ಕನಸು

ಅದು ನಿನ್ನ ಮನಸು

ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ

ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ

ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ

ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ

ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ

ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ

ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ

ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ

ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ

ನೀ ತಾನೆ ನನ್ನ ಜೀವ

ಎಂದೊ ಕಂಡ ಕನಸು

ಅದು ನಿನ್ನ ಮನಸು

ನಿನ್ನ ಮನಸಿಗಾಗಿ ಸೋತೇ

ನೂರಾರು ಮುಳ್ಳುಗಳಾ ನಡುವೆ ಹೂವಿದೇ

ನೂರಾರು ನೋವುಗಳಾ ನಡುವೆ ಒಲವಿದೇ

F)ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ

ನೆನೆನೆನೆದು ಏಕಿರುವೆ ಮಾತನಾಡದೆ

ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ

ನೀ ತಾನೆ ನನ್ನ ಜೀವ

ಎಂದೊ ಕಂಡ ಕನಸು

ಅದು ನಿನ್ನ ಮನಸು

ನಿನ್ನ ಮನಸಿಗಾಗಿ ಸೋತೇ..

เพิ่มเติมจาก Rajesh Krishnan

ดูทั้งหมดlogo