ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು.
ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು.
ಸಿರಿತನವೆಂದು ಶಾಶ್ವತವಲ್ಲ,
ಬಡಜನರೆಂದು...ಪ್ರಾಣಿಗಳಲ್ಲ
ದೇವರ ಆಟ ಬಲ್ಲವರಿಲ್ಲ..
ಬಾಳಿನ ಮರ್ಮ...ಅರಿತವರಿಲ್ಲ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ, ಪಾಪ
ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ
ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ
ಎಂದು ಆಳಾಗ ಬಲ್ಲವನೆ ಅರಸಾಗುವ,
ಒಳ್ಳೆ ಅರಸಾಗುವ...
ಹೇ....ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..
ಸುಜಾತ ರವರ ಸಹಾಯದೊಂದಿಗೆ
ಕಪ್ಪನೆ ಮೋಡ ಕರಗಲೆಬೇಕು,
ಆಗಸದಿಂದಾ.....ಇಳಿಯಲೆಬೇಕು
ಕಪ್ಪನೆ ಮೋಡ ಕರಗಲೆಬೇಕು,
ಆಗಸದಿಂದಾ ಇಳಿಯಲೆಬೇಕು
ಕೋಟೆಕಟ್ಟಿ ಮೆರೆದವರೆಲ್ಲ
ಏನಾದರೂ, ಏನೂ?
ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು
ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ
ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು
ಇನ್ನು ನೀನ್ಯಾವ ಲೆಕ್ಕ ಹೇಳು
ಸುಕುಮಾರಿಯೇ, ಅಯ್ಯೋ ಹೆಮ್ಮಾರಿಯೆ
ಹೇ....ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
ಶ್ರೀಮಂತಿಕೆಯು ಮೆರೆಯಲು ಅಲ್ಲ,
ರಾಜಕುಮಾರಿ...ದೇವತೆಯಲ್ಲ
ಶ್ರೀಮಂತಿಕೆಯು ಮೆರೆಯಲು ಅಲ್ಲ,
ರಾಜಕುಮಾರಿ...ದೇವತೆಯಲ್ಲ
ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ, ಆ..
ನಿನ್ನಂತೆ ರೋಷ ವೇಷ ನಮಗೂ ಇದೆ
ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ, ಆ..
ನಿನ್ನಂತೆ ರೋಷ ವೇಷ ನಮಗೂ ಇದೆ
ಈ ನಿಜವನ್ನು ಅರಿತಾಗ ಹೆಣ್ಣಾಗುವೆ,
ಇಲ್ಲ ಮಣ್ಣ ತಿನ್ನುವೇ...
ಹೇ.....ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
ರವಿ ಎಸ್ ಜೋಗ್