menu-iconlogo
logo

Meru giriyane

logo
เนื้อเพลง
ಮೇರು ಗಿರಿ ಆಣೆ ನೀಲಿ ಕಡಲಾಣೆ

ನೀನು ವಧುವಾದೆ ನನಗೆ

ಭೂಮಿ ಆಕಾಶ ಏನಾಯ್ತೋ ಕಾಣೆ

ಹೃದಯ ತೇಲಾಡಿದೆ ದೇವರಾಣೆ

ಏಳು ಸ್ವರದಾಣೆ ನಾದ ಶೃತಿ ಆಣೆ

ನೀನು ವರವಾದೆ ನನಗೆ

ಕನಸು ನನಸಾಗಿಸಿ ನೀನು ಬಂದೆ

ಸತಿಯ ಸೌಭಾಗ್ಯದ ಸೌಖ್ಯ ತಂದೆ

ಒಂದುಗೂಡಿತು ನಾಲ್ಕು ಕಂಗಳು

ನಾಚಿಕೊಂಡಿತು ತಿಳಿಯ ತಿಂಗಳು

ನಮ್ಮ ಮಿಲನವ ನೋಡಬಂದವು

ಆರು ಋತುಗಳು….

ಏಕವಾದವು ನಾಲ್ಕು ತುಟಿಗಳು

ಮೂಕವಾದವು ದುಂಬಿ ದನಿಗಳು

ಒಂದೇ ದಿನದಲ್ಲಿ ಶರಣು ಬಂದವು

ಎಲ್ಲ ಸುಖಗಳು…..

ಶುಭಯೋಗದ ಸುಖರಾಗದ ಆಲಾಪ ಹೊರಟಿದೆ

ಪ್ರೇಮದ… ಸಂಗೀತ ಕಚೇರಿಯಲಿ

ಶುಭಯೋಗದ ಸುಖರಾಗದ ಆಲಾಪ ಹೊರಟಿದೆ

ಪ್ರೇಮದ…. ಸಂಗೀತ ಕಚೇರಿಯಲಿ

ಮೇರು ಗಿರಿ ಆಣೆ ನೀಲಿ ಕಡಲಾಣೆ

ನೀನು ವಧುವಾದೆ ನನಗೆ

ಭೂಮಿ ಆಕಾಶ ಏನಾಯ್ತೋ ಕಾಣೆ

ಹೃದಯ ತೇಲಾಡಿದೆ ದೇವರಾಣೆ…

ಪ್ರೇಮ ಪೂಜೆಗೆ ನಾವೇ ಕುಸುಮವು

ಪಾದ ಸೇವೆಗೆ ನಾವೇ ಪ್ರಥಮವು

ಬಾಡದಿರಲು ನಾ ಅಕ್ಷಯಾಮೃತ

ನಿನ್ನ ಸ್ಮರಣೆಯು…..

ನಿನ್ನ ಗುಣಗಳೇ ಒಂದು ಸಂಪುಟ

ನಿನ್ನ ರೂಪವೇ ಅದರ ಮುಖಪುಟ

ಮಾರು ಹೋದೆನು ಸೂರೆಯಾದೆನು

ಶರಣು ಎಂದೆನು….

ಅನುಗಾಲದ ಅಪರೂಪದ ಆನಂದ ಹೊರಟಿದೆ

ಸ್ನೇಹದ…. ಸಂತೋಷ ಕೂಟದಲ್ಲಿ

ಅನುಗಾಲದ ಅಪರೂಪದ ಆನಂದ ಹೊರಟಿದೆ

ಸ್ನೇಹದ…. ಸಂತೋಷ ಕೂಟದಲ್ಲಿ

ಮೇರು ಗಿರಿ ಆಣೆ ನೀಲಿ ಕಡಲಾಣೆ

ನೀನು ವಧುವಾದೆ ನನಗೆ

ಭೂಮಿ ಆಕಾಶ ಏನಾಯ್ತೋ ಕಾಣೆ

ಹೃದಯ ತೇಲಾಡಿದೆ ದೇವರಾಣೆ

ಏಳು ಸ್ವರದಾಣೆ ನಾದ ಶೃತಿ ಆಣೆ

ನೀನು ವರವಾದೆ ನನಗೆ

ಕನಸು ನನಸಾಗಿಸಿ ನೀನು ಬಂದೆ

ಸತಿಯ ಸೌಭಾಗ್ಯದ ಸೌಖ್ಯ ತಂದೆ…