menu-iconlogo
huatong
huatong
เนื้อเพลง
บันทึก
ಚಿತ್ರ : ಎರಡು ರೇಖೆಗಳು ; ಹಾಡು : ಗಂಗೆಯ ಕರೆಯಲಿ

ಸಾಹಿತ್ಯ : ಆರ್ ಎನ್ ಜಯಗೋಪಾಲ್ ;

ಸಂಗೀತ : ಎಂ ಎಸ್ ವಿಶ್ವನಾಥನ್

ಮೂಲ ಗಾಯನ : ಎಸ್ ಪಿ ಬಾಲಸುಬ್ರಮಣ್ಯಂ & ವಾಣಿ ಜಯರಾಮ್

(M) : ಗಂಗೆಯ ಕರೆಯಲಿ ಹೃದಯದಾ ಸಂಗಮ

ಎದೆಯಲೀ ಅರಿಯದಾ ನೂತನಾ ಸಂಭ್ರಮ

(F) : ಗಂಗೆಯ ಕರೆಯಲಿ ಹೃದಯದಾ ಸಂಗಮ

ಎದೆಯಲೀ ಅರಿಯದಾ ನೂತನಾ ಸಂಭ್ರಮ

(M) : ಬಂದೆ ನೀನು ತಂಗಾಳಿಯಲೂ ಈ ಬಾಳಲೀ

ಪ್ರೀತಿ ಹೂವ ಸೌರಭ ಚೆಲ್ಲಿ ಈ ನಗೆಯಲೀ

(F) : ಅಚ್ಛಾ

ಕಾಶಿ ಮಡಿಲ ತನ್ನೀ ಮನದಾ ಹೂ ತೋಟದೀ

ಕಸ್ತೂರಿ ಕನ್ನಡದಿಂಪೂ ನೀ ಸೂಸಿದೆ

(M) : ನಿನ್ನ ಹೃದಯ ಸೌಧದಲ್ಲಿ ನಾ ನೆಲೆಸಿದೆ ಏ ಎ ಎ

ನಿನ್ನ ಹೃದಯ ಸೌ.... ಧದಲ್ಲಿ ನಾ ನೆಲೆಸಿದೆ ಏ ಎ ಎ

(F) : ನಿನ್ನ ಒಲವ ಅಲೆಯ ಮೇಲೆ ನಾ ತೇಲಿದೆ ಏ ಎ ಎ

ನಿನ್ನ ಒಲವ ಅಲೆಯ ಮೇಲೆ ನಾ ತೇಲಿದೆ

ಗಂಗೆಯ ಕರೆಯಲಿ ಹೃದಯದಾ ಸಂಗಮ

ಎದೆಯಲೀ ಅರಿಯದಾ ನೂತನಾ ಸಂಭ್ರಮ

(M) : ಜೀವ ಜೀವ ಒಂದಾದಾಗ ಆನಂದವೂ

ಜನ್ಮ ಜನ್ಮ ಬಂಧವು ಮಿಡಿದ ಸಂಗೀತವೂ

(F) : ಅಚ್ಛಾ

ಇಂದುಕಂಡ ಈ ಸುಖವೆಂದೂ ಸ್ಥಿರವಾಗಲೀ

ಕಾಲದಾಟ ಹೀಗೇ ನಿಂದು ಸುಖನೀಡಲೀ

(M) : ವಿಶ್ವನಾಥ ಸಾಕ್ಷಿ ನಮ್ಮ ಈ ಪ್ರೇಮಕೇ ಹಾಂ ......

ವಿಶ್ವನಾಥ ಸಾಕ್ಷಿ ನಮ್ಮ ಈ ಪ್ರೇಮಕೇ

(F) : ಹಾಂ .ಸೂರ್ಯಚಂದ್ರ ಸಾಕ್ಷಿ ನಮ್ಮ ಮಧುರಬಂಧಕೆ ಏ ಎ ಎ

ಸೂರ್ಯಚಂದ್ರ ಸಾಕ್ಷಿ ನಮ್ಮ ಮಧುರಬಂಧಕೆ

(M) : ಗಂಗೆಯ ಕರೆಯಲಿ ಹೃದಯದಾ ಸಂಗಮ

(F) : ಎದೆಯಲೀ ಅರಿಯದಾ ನೂತನಾ ಸಂಭ್ರಮ

เพิ่มเติมจาก S. P. Balasubrahmanyam/Vani Jairam/M.s. Viswanathan

ดูทั้งหมดlogo